ಬಳ್ಳಾರಿ : ಯೋಧರ ಪ್ಯಾರಾಚೂಟ್ ತರಬೇತಿ ಬೆಳೆ ಅವಗಡ ಸಂಭವಿಸಿದ್ದು, 50 ಅಡಿ ಅಂತರದಿಂದ ಜಿಗಿದ ಇಬ್ಬರ ಕಾಲುಗಳು ಮುರಿತ ಆಗಿರುವ ಘಟನೆ ಬಳ್ಳಾರಿ ಹೊರವಲಯದ ಪೀಡಿಹಳ್ಳಿ ಭಾಗದಲ್ಲಿ ಈ ಒಂದು ಘಟನೆ ಸಂಭವಿಸಿದೆ. ಯೋಧ ಚಿನ್ನ ರಾಜ್ ಅವರ ಕಾಲಿನ ಮೂಳೆಮುರಿತವಾಗಿದ್ದು ಮತ್ತೊಬ್ಬ ಯೋಧನಿಗೂ ಕಾಲಿನ ಮೂಳೆ ಮುರಿತವಾಗಿದೆ.ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿಗೆ ಏರ್ ಲಿಫ್ಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಬಳ್ಳಾರಿಯಲಿ ಪ್ಯಾರಾಚೂಟ್ ತರಬೇತಿ ಟ್ರೇನಿಂಗನ್ನು ಕೊಡಲಾಗುತ್ತಿದೆ. ವಿಮಾನದಿಂದ ಯೋಧರು ಜಂಪ್ ಮಾಡಿದ್ದಾರೆ. ಈ ವೇಳೆ ಪ್ಯಾರಾಚೂಟ್ ಓಪನ್ ಆಗಿದೆ. ಬಳಿಕ ಲ್ಯಾಂಡಿಂಗ್ ಸಂದರ್ಭದಲ್ಲಿ ಸಮಸ್ಯೆ ಉಂಟಾಗಿ ಇಬ್ಬರು ಯೋಧರು ಹೊಲದಲ್ಲಿ ಬಿದ್ದಿದ್ದಾರೆ. ಈ ವೇಳೆ ಇಬ್ಬರ ಕಾಲುಗಳು ಮುರಿತವಾಗಿದ್ದು ತಕ್ಷಣ ಅವರನ್ನು ಏರ್ಲಿಫ್ಟ್ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ಭಾರತೀಯ ವಾಯು ಸೇನೆಯಿಂದ ಪ್ಯಾರಾಚೂಟ್ ತರಬೇತಿ ನೀಡಲಾಗುತ್ತಿತ್ತು. ನಿನ್ನೆ ಬೆಳಿಗ್ಗೆ 417 ಸೈನಿಕರಿಂದ ಪ್ಯಾರಾಚೂಟ್ ತರಬೇತಿ ನೀಡಲಾಗುತ್ತಿತ್ತು. ಸೇನಾ ವಿಮಾನದಿಂದ 50 ಅಡಿ ಎತ್ತರದಿಂದ ಜಿಗಿದಿದ್ದಾರೆ. ಪ್ಯಾರಾಚೂಟು ಸಹಿತ 417 ಯೋಧರು ಕೆಳಗೆ ಜಿಗಿದಿದ್ದಾರೆ. ಆಗ ಪ್ಯಾರಾಚೂಟ್ನಲ್ಲಿ ಸಮಸ್ಯೆ ಉಂಟಾಗಿ ಇಬ್ಬರು ಯೋಧರು ಕೆಳಗೆ ಬಿದ್ದಿದ್ದಾರೆ ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.








