ಕಾರವಾರ:ಚಾರ್ಸಿ ತುಂಡಾಗಿ ರಸ್ತೆಯಲ್ಲೇ ಬಸ್ ಪಲ್ಟಿಯಾದ ಘಟನೆ ಕಾರವಾರದಲ್ಲಿ ನಡೆದಿದೆ.ಉತ್ತರ ಕನ್ನಡ ಜಿಲ್ಲೆ ಕಾರವಾರದ ಹಬ್ಬುವಾಡ ರಸ್ತೆಯಲ್ಲಿ ಅಪಘಾತ ಬಸ್ ಪಲ್ಟಿಯಾಗಿದೆ.ಬಸ್ ನ ಚಾರ್ಸಿ ತುಂಡಾಗಿ ರಸ್ತೆಯಲ್ಲೇ ಬಸ್ ಪಲ್ಟಿಯಾಗಿದೆ.
ಬಸ್ನಲ್ಲಿದ್ದ ಹಲವರಿಗೆ ಗಾಯಗಳಾಗಿದೆ.ಅವರನ್ನೆಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಕೊಡಿಸಲಾಗಿದೆ. ಕಂಡಿಷನ್ ಇಲ್ಲದ ಬಸ್ ಬಿಟ್ಟಿದ್ದಕ್ಕೆ ಜನರು ಆಕ್ರೋಶ ಹೊರ ಹಾಕಿದ್ದಾರೆ. ಅಪಘಾತ ಹಿನ್ನೆಲೆ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.ಸುಮಾರು ಐವತ್ತು ಜನ ಪ್ರಯಾಣಿಸುತ್ತಿದ್ದರು.
ಕಾರವಾರ ನಗರದಿಂದ ಕೆರವಡಿ ಗ್ರಾಮಕ್ಕೆ ತೆರಳುತ್ತಿದ್ದ ಸರ್ಕಾರಿ ಬಸ್ ಪಲ್ಟಿಯಾಗಿದೆ. ಬಸ್ಸಿನ ಹಿಂಬದಿ ಚಾರ್ಸಿ ಒಮ್ಮೆಲೆ ಕಟ್ ಆಗಿದ್ದು ಬಸ್ ರಸ್ತೆಯಲ್ಲಿಯೇ ಪಲ್ಟಿಯಾಗುವ ಹಂತಕ್ಕೆ ತಲುಪಿತ್ತು. ಅದೃಷ್ಟವಶಾತ್ ಪ್ರಾಣ ಹಾನಿ ಸಂಭವಿಸಿಲ್ಲ. ಬಸ್ಸಿನಲ್ಲಿದ್ದ ಹಲವರಿಗೆ ಗಾಯಗಳಾಗಿವೆ. ಕಂಡಿಷನ್ ಇಲ್ಲದ ಬಸ್ಸನ್ನ ಬಿಟ್ಟ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ಹೊರ ಹಾಕಿದ್ದಾರೆ. ರಸ್ತೆಯಲ್ಲಿಯೇ ಬಸ್ ಪಲ್ಟಿಯಾದ ಹಿನ್ನಲೆ ಕಾರವಾರ ಕೈಗಾ ರಸ್ತೆ ಸಂಚಾರ ವ್ಯತ್ಯಯವಾಗಿತ್ತು.