ಬೆಂಗಳೂರು : ಬೆಂಗಳೂರಿನಲ್ಲಿ ವಕೀಲೆ ಒಬ್ಬಳಿಗೆ ಮದುವೆಯಾಗುತ್ತೇನೆ ಎಂದು ಹೇಳಿ ನಂಬಿಸಿ ಅತ್ಯಾಚಾರ ಎಸಗಿರುವ ಆರೋಪದ ಮೇಲೆ ಸ್ಪೆಷಲ್ ಆಕ್ಷನ್ ಫೋರ್ಸ್ ಅಲ್ಲಿದ್ದ ಸಿದ್ದೇಗೌಡ ಎನ್ನುವ ವಿರುದ್ಧ ಈ ಒಂದು ಆರೋಪ ಕೇಳಿ ಬಂದಿದ್ದು, ಬೆಂಗಳೂರಿನ ಬಸವೇಶ್ವರ ತ್ರಣಿ ಪೊಲೀಸರು ಇದೀಗ ಪೊಲೀಸ್ ಕಾನ್ಸ್ಟೇಬಲ್ ಸಿದ್ದೇಗೌಡನನ್ನು ಅರೆಸ್ಟ್ ಮಾಡಿದ್ದಾರೆ.
ಸಿದ್ದೇಗೌಡನ ವಿರುದ್ಧ ಮದುವೆಯಾಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ ಆರೋಪ ಕೇಳಿಬಂದಿದೆ. ಬೆಂಗಳೂರು ಬಸವೇಶ್ವರನಗರ ಪೊಲೀಸರಿಂದ ಇದೀಗ ಪಿ.ಸಿ ಸಿದ್ದೇಗೌಡನನ್ನು ಬಂಧಿಸಲಾಗಿದೆ.ಮಂಗಳೂರಿನ ಪಾಂಡೇಶ್ವರ SAF ನಲ್ಲೀದ್ದ ಪಿಸಿ ಸಿದ್ದೇಗೌಡ, ವಿಜಯಪುರ ಜಿಲ್ಲೆಯ ಬಬಲೇಶ್ವರ ಮೂಲದ ಯುವತಿಯ ಮೇಲೆ ಅತ್ಯಾಚಾರ ಆರೋಪ ಕೇಳಿಬಂದಿದೆ. ಸಿದ್ದೇಗೌಡ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಮೂಲದ ನಿವಾಸಿ ಎಂದು ತಿಳಿದುಬಂದಿದೆ. ಹುಬ್ಬಳ್ಳಿ ಮದುವೆ ಒಂದರಲ್ಲಿ ಯುವತಿ ಸಿದ್ದೇಗೌಡನಿಗೆ ಪರಿಚಯವಾಗಿದೆ.
ಮೊದಲಿಗೆ ಮದುವೆಯಾಗುವುದಾಗಿ ಸಿದ್ದೇಗೌಡ ಹೇಳಿದ್ದ ಮದುವೆಗೂ ಮುಂಚೆ ವತಿಯನ್ನು ಕರೆಸಿ ಅತ್ಯಾಚಾರ ಎಸಗಿದ್ದಾನೆ. ಬೆಂಗಳೂರಿನ ಕೆಲವು ಕಡೆ ಲಾಡ್ಜ್ ಬುಕ್ ಮಾಡಿ ಅತ್ಯಾಚಾರ ಎಸಗಿದ್ದಾನೆ. ನಂತರ ಜಾತಿ ವಿಚಾರವಾಗಿ ಬೇಡ ಎಂದು ಸಿದ್ದೇಗೌಡ ಹೇಳಿದ್ದಾನೆ. ನಿಮ್ಮದು ಕೀಳು ಜಾತಿ ಮದುವೆಗೆ ನಮ್ಮ ಮನೆಯಲ್ಲಿ ಒಪ್ಪಲ್ಲ ಅಂತ ಹೇಳಿದ್ದಾನೆ ಅಲ್ಲದೇ ಲಕ್ಷಾಂತರ ರೂಪಾಯಿ ಸಾಲ ಪಡೆದು ವಂಚಿಸಿದ್ದಾನೆಂದು ವಕೀಲೆ ಬಸವೇಶ್ವರನಗರ ಠಾಣೆಗೆ ದೂರು ನೀಡಿದ್ದಾಳೆ. ಈ ಹಿನ್ನೆಲೆ ಪಿಸಿ ಸಿದ್ದೇಗೌಡನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.