ಮಂಡ್ಯ : ಕಾವೇರಿ ನದಿಗೆ ಹಾರಿ ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಬಚಾವಾಗಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಮಹದೇವಪುರ ಪಟ್ಟಣದಲ್ಲಿ ನಡೆದಿದೆ.ಬೆಂಗಳೂರು ಮೂಲದ 19 ವರ್ಷದ ಯುವತಿಯನ್ನು ಸದ್ಯ ರಕ್ಷಣೆ ಮಾಡಲಾಗಿದೆ.
ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವತಿಯನ್ನು ರಕ್ಷಿಸಲಾಗಿದೆ. ಶ್ರೀರಂಗಪಟ್ಟಣದ ಮಹದೇವಪುರ ಗ್ರಾಮದ ಬಳಿ ಈ ಒಂದು ಘಟನೆ ನಡೆದಿದೆ. ನಿನ್ನೆ ಸಂಜೆ ಬೆಂಗಳೂರಿನ ಯುವತಿ ನದಿಗೆ ಹಾರಿದ್ದಳು. ಕಾವೇರಿ ನದಿಯಲ್ಲಿ ಯುವತಿ ಕೊಚ್ಚಿಕೊಂಡು ಹೋಗುತ್ತಿದ್ದಳು. ಈ ವೇಳೆ ಅದೃಷ್ಟವಶಾತ್ ಬಚಾವ್ ಆಗಿದ್ದಾಳೆ. ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ನಡುಗಡ್ಡೆಯಲ್ಲಿ ಸಿಲುಕಿ ಪರದಾಡಿದ್ದಾಳೆ.
ರಾತ್ರಿಯಿಡಿ ನಡು ಗಡ್ಡೆಯಲ್ಲೇ ಸಿಲುಕಿದ್ದಾಳೆ. ಇಂದು ಬೆಳಿಗ್ಗೆ ಸ್ಥಳೀಯರು ಯುವತಿಯನ್ನು ಗಮನಿಸಿದ್ದಾರೆ. ನದಿಯ ಮಧ್ಯೆ ಸಿಲುಕಿ ಯುವತಿ ಸಹಾಯಕ್ಕೆ ಅಂಗಲಾಚಿದ್ದಾಳೆ. ಯುವತಿಯ ಕಿರುಚಾಟ ಕೇಳಿ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದೊಂದಿಗೆ ಸ್ಥಳಕ್ಕೆ ಬಂದಿದ್ದು, ಪೊಲೀಸರು ಆಗಮಿಸಿದ್ದಾರೆ. ಸಿಬ್ಬಂದಿಗಳು ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ಸ್ಥಳೀಯ ಆಸ್ಪತ್ರೆಯಲ್ಲಿ ಸದ್ಯ ಯುವತಿಗೆ ಚಿಕಿತ್ಸೆ ನೀಡಲಾಗುತ್ತಿದೆ.ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಕಾವೇರಿ ನದಿ ಪ್ರವಾಹದಲ್ಲಿ ಅಪರಿತ ಯುವತಿಯನ್ನ ರಕ್ಷಣೆ ಮಾಡಿದ್ದ ಪ್ರಕರಣಕ್ಕೆ ಸಂಭಂಧಿಸಿದಂತೆ ಆತ್ಮಹತ್ಯೆಗೆಂದು ನಿನ್ನೆ ಸಂಜೆ ಕಾವೇರಿ ನದಿಗೆ ಯುವತಿ ಧುಮುಕಿದ್ದಾಳೆ. ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಆದರೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಯುವತಿಯನ್ನು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಕಾನೂನು ವಿದ್ಯಾರ್ಥಿ ಪವಿತ್ರ(20) ಎಂದು ತಿಳಿದುಬಂದಿದೆ.
ಅಗ್ನಿಶಾಮಕ ಸಿಬ್ಬಂದಿಗಳ ಕಾರ್ಯಾಚರಣೆಯಿಂದ ಯುವತಿ ರಕ್ಷಣೆ ಮಾಡಲಾಗಿದೆ. ಆತ್ಮಹತ್ಯೆಗೆಂದು ನಿಮಿಷಾಂಭ ದೇಗುಲದ ಸೇತುವೆ ಬಳಿ ನದಿಗೆ ಯುವತಿ ಹಾರಿದ್ದಳು. ನದಿ ಪ್ರವಾಹದಲ್ಲಿ ಐದಾರು ಕಿ.ಮೀ ಕೊಚ್ಚಿಹೋಗಿ ನದಿ ಮಧ್ಯೆ ನಡುಗಡ್ಡೆಗೆ ಸಿಲುಕಿ ಇಡೀ ರಾತ್ರಿ ನರಳಾಟ ನಡೆಸಿದ್ದಾಳೆ. ಮುಂಜಾನೆ ಯುವತಿಯನ್ನ ಗಮನಿಸಿದ್ದ ರೈತರು, ನರಳಾಟ ಮತ್ತು ರಕ್ಷಣೆಗೆ ಮನವಿ ಮಾಡಿದ್ದಾಳೆ. ಸ್ಥಳೀಯರ ಮಾಹಿತಿ ಪಡೆದು ಸ್ಥಳಕ್ಕೆ ಬಂದು ಅಗ್ನಿಶಾಮಕ ಸಿಬ್ಬಂದಿಗಳಿಂದ ರಕ್ಷಣೆ ಮಾಡಲಾಗಿದೆ.