ಬೆಂಗಳೂರು : ಬೆಂಗಳೂರಿನಲ್ಲಿ ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆ ಪ್ರಕರಣಗಳು ಈ ಹಿಂದೆ ನಡೆದಿದ್ದವು. ಇದೀಗ ಇಂದು ಮತ್ತೊಂದು ಆತ್ಮಹತ್ಯೆ ಘಟನೆ ನಡೆದಿದ್ದು ಕೆಂಗೇರಿ ಮೆಟ್ರೋ ಸ್ಟೇಷನ್ ನಲ್ಲಿ ಯುವಕ ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆ ಶರಣಾಗಿದ್ದಾನೆ.
ಹೌದು ಬೆಂಗಳೂರಿನ ಕೆಂಗೇರಿ ಮೆಟ್ರೋ ಸ್ಟೇಷನ್ ನಲ್ಲಿ ಒಂದು ಕಡೆ ನಡೆದಿದ್ದು ಬಿಎಮ್ಆರ್‌ಸಿಎಲ್ ಅಧಿಕಾರಿಗಳು ಸದ್ಯ ಪೋಲಿಸರಿಗಾಗಿ ಕಾಯುತ್ತಿದ್ದಾರೆ. ಮೈಸೂರು ರಸ್ತೆಯಿಂದ ಚೆಲ್ಲಕಟ್ಟದ ವರೆಗೆ ಮೆಟ್ರೋ ಸಂಚಾರ ಸ್ಥಗಿತವಾಗಿದೆ ವೈಟ್ ಫೀಲ್ಡ್ ನಿಂದ ಮೈಸೂರು ರಸ್ತೆ ನಿಲ್ದಾಣದವರೆಗೆ ಮೆಟ್ರೋ ಸಂಚಾರ ಸ್ಥಗಿತವಾಗಿದೆ. ಬೆಳಿಗ್ಗೆ 8.15ಕ್ಕೆ ನೇರಳೆ ಮಾರ್ಗದಲ್ಲಿ ಈ ಒಂದು ಘಟನೆ ನಡೆದಿದೆ. ವೈಟ್ ಫೀಲ್ಡ್ ನಿಂದ ಚೆಲ್ಲಗಟವರೆಗಿನ ಮಾರ್ಗದಲ್ಲಿ ಈ ಘಟನೆ ಸಂಭವಿಸಿದೆ ಹಾಗಾಗಿ ಮೈಸೂರು ರಸ್ತೆಯಿಂದ ಚೆಲ್ಲಗಟ್ಟವರಿಗೆ ಮೆಟ್ರೋ ಸಂಚಾರ ಸ್ಥಗಿತಗೊಂಡಿದೆ.








