ಉತ್ತರಕನ್ನಡ : ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹಿರಿಯರು ಆಹಾರದ ವಿಚಾರವಾಗಿ ಬಹಳ ಪದ್ಧತಿ ಅನುಸರಿಸುತ್ತಿದ್ದರು ಹೇಗೆ ಕುಳಿತುಕೊಂಡು ಊಟ ಮಾಡಬೇಕು ಯಾವ ರೀತಿ ತಿನ್ನಬೇಕು ಬಾಯಲ್ಲಿ ಎಷ್ಟು ಸಲ ಅನ್ನ ಅಗಿಯಬೇಕು ಎನ್ನುವುದರ ಕುರಿತು ಸಂಪೂರ್ಣವಾಗಿ ಹೇಳಿದ್ದಾರೆ. ಆದರೆ ಇಂದಿನ ವೇಗದ ಜಗತ್ತಿನಲ್ಲಿ ಜನಕ್ಕೆ ತಿನ್ನೋದು ಬಿಡಿ ನೀರು ಕುಡಿಯೋಕು ಸಹ ಸಮಯ ಇಲ್ಲ ಇದೀಗ ಉತ್ತರ ಕನ್ನಡದಲ್ಲಿ ಊಟ ಮಾಡುವಾಗ ಅನ್ನದ ಅಗಳು ಗಂಟಲಲ್ಲಿ ಸಿಲುಕಿ ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿದ್ದಾನೆ.
ಹೌದು ಅನ್ನದ ಅಗಳು ಗಂಟಲಿಗೆ ಸಿಲುಕಿ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಬಿಣಗಾ ಗ್ರಾಮದಲ್ಲಿ ಅಮಿತ್ ಮಾಳಸೇರ (38) ಎನ್ನುವ ಯುವಕ ಗಂಟಲಲ್ಲಿ ಅನ್ನ ಸಿಲುಕಿ ಸಾವನಪ್ಪಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬಿಣಗಾ ಗ್ರಾಮದ ನಿವಾಸಿಯಾಗಿದ್ದು ಅನ್ನ ಗಂಟಲಿನಲ್ಲಿ ಸಿಲುಕಿಕೊಂಡು ಅಮಿತ್ ತೀವ್ರ ನರಳಾಡಿದ್ದ ಮನೆಯವರು ನೀರು ಕುಡಿಸಿದ ತಕ್ಷಣ ಕುಸಿದು ಬಿದ್ದಿದ್ದ. ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಸಾವನಪ್ಪಿದ್ದಾನೆ. ಘಟನೆ ಕುರಿತು ಕಾರವಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.