ದಕ್ಷಿಣಕನ್ನಡ : ಧರ್ಮಸ್ಥಳ ಗ್ರಾಮದ ವಿವಿಧೆಡೆ ತಾನು ಹಲವು ಮೃತದೇಹಗಳನ್ನು ಹೂತು ಹಾಕಿರುವುದಾಗಿ ಅನಾಮಧೇಯ ವ್ಯಕ್ತಿಯೋರ್ವ ನೀಡಿದ ದೂರು ಆಧರಿಸಿ, ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಪ್ರಕರಣದ ತನಿಖೆ ನಡೆಸುತ್ತಿದೆ. ದೂರುದಾರ ಗುರುತಿಸಿರುವ ಸ್ಥಳಗಳನ್ನು ಎಸ್‌ಐಟಿ, ಕಾರ್ಮಿಕರ ಮೂಲಕ ಅಗೆಯುವ ಕೆಲಸ ಶುರು ಮಾಡಿಸಿದಾಗ ಮಂಗಳವಾರ ಸಂಜೆಯವರೆಗೆ ಅಗೆದರೂ ಯಾವುದೇ ಅಸ್ಥಿಪಂಜರದ ಕುರುಹು ಸಿಗದೇ ಇದ್ದುದರಿಂದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.
ಇದೀಗ ತಾನು ಶವಗಳನ್ನು ಹೊತ್ತು ಇಟ್ಟಿರುವ ಕುರಿತು ದೂರುದಾರ ಮತ್ತೊಂದು ಸ್ಫೋಟಕ್ಕೆ ಹೇಳಿಕೆ ನೀಡಿದ್ದು, ಈ ಒಂದು ಪ್ರಕರಣದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯ ಹೆಸರು ದೂರುದಾರ ತಿಳಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಎಸ್ಐಟಿ ಅಧಿಕಾರಿಗಳು ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿಯನ್ನು ಕೂಡ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಎಸ್ಐಟಿ ವಿಚಾರಣೆಯ ವೇಳೆ ದೂರುದಾರ ನಿವೃತ್ತ ಪೊಲೀಸ್ ಅಧಿಕಾರಿಯ ಹೆಸರು ಹೇಳಿದ್ದಾನೆ ಹೆಣ ಹೂತು ಹಾಕಲು ಪೊಲೀಸ್ ಅಧಿಕಾರಿ ಕೂಡ ಸಾಥ್ ನೀಡಿದ್ದಾನೆ. ಆಗ ಈ ಭಾಗದಲ್ಲಿ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಹಾಗಾಗಿ ನಿವೃತ್ತ ಆಧಿಕಾರಿಯನ್ನು ಕೂಡ SIT ಅಧಿಕಾರಿಗಳು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಧರ್ಮಸ್ಥಳ ಗ್ರಾಮ ಪಂಚಾಯತಿಯಲ್ಲಿ ಇಂದು ಏಕ ಕಾಲದಲ್ಲಿ 3 ಕಡೆ ಭೂಮಿ ಅಗೆದು ಅಸ್ತಿಪಂಜರಗಳ ಕುರುಹು ಪತ್ತೆ ಕುರಿತು ತೀರ್ಮಾನಿಸಲಾಗಿದ್ದು ಏಕಕಾಲದಲ್ಲಿ ಮೂರು ಕಡೆ ಅಗೆಯಲು ನಿರ್ಧರಿಸಲಾಗಿದೆ. ಸರ್ಕಾರಿ ಅಧಿಕಾರಿಗಳು ಮೂವರು ತಹಸೀಲ್ದಾರ್ ನೇತೃತ್ವದಲ್ಲಿ ಏಕಕಾಲದಲ್ಲಿ ಅಗೆಯಲು ನಿರ್ಧರಿಸಲಾಗಿದ್ದು ಹಾಗಾಗಿ ಎಸ್ಐಟಿ ತಂಡ ಮೂರು ತಂಡಗಳನ್ನು ರಚನೆ ಮಾಡಿದೆ.