ಬೆಂಗಳೂರು : ಬೆಂಗಳೂರಲ್ಲಿ ರಸ್ತೆ ಬದಿಯಲ್ಲಿ ವಾಯು ವಿಹಾರಕ್ಕೆ ತೆರಳಿದ್ದಾಗ ವೃದ್ಧನ ಮೇಲೆ ಮರ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಎಸ್ ವಿಶ್ವನಾಥ್ ಎನ್ನುವವರದರು ವಾಯುವಿಹಾರಕ್ಕೆ ತೆರಳಿದ್ದಾಗ ಈ ಒಂದು ಘಟನೆ ನಡೆದಿದೆ. ವಿಶ್ವನಾಥ ಸೊಂಟದ ಮೂಳೆಗಳು ಮುರಿತವಾಗಿದ್ದು, ಸ್ಥಳಕ್ಕೆ ಆಗಮಿಸಿ ಸಿಬ್ಬಂದಿಗಳು ಕೇವಲ ಮರದ ಕೊಂಬೆಗಳನ್ನು ತೆರವು ಗೊಳಿಸಿದರು. ಕೇವಲ ಮರದ ಕೊಂಬೆ ತೆರವು ಮಾಡಿ ಬಿಬಿಎಂಪಿ ಸಿಬ್ಬಂದಿ ನಿರ್ಗಮಿಸಿದ್ದಾರೆ.
ಬಿಬಿಎಂಪಿ ಅಮಾನವೀಯ ವರ್ತನೆಗೆ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.