ರಾಯಚೂರು : ನಿನ್ನೆ ರಾಯಚೂರಲ್ಲಿ ಘೋರ ದುರಂತವೊಂದು ನಡೆದಿದ್ದು, ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿ ಮೇಲೆ ಮರವೊಂದು ಮುರಿದುಬಿದ್ದು ಗಂಡ-ಹೆಂಡತಿ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣದ ಹೊರವಲಯದಲ್ಲಿ ನಡಿದಿದೆ.
ಮೃತರನ್ನು ನಾಗಲಾಪುರ ಗ್ರಾಮದ ರಮೇಶ್ (26) ಮತ್ತು ಅನುಸೂಯಾ (24) ಎಂದು ತಿಳಿದುಬಂದಿದೆ.ದಂಪತಿಯು ಮುದಗಲ್‌ನಿಂದ ನಾಗಲಾಪುರಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ದಂಪತಿಯ ಮೂರು ವರ್ಷದ ಮಗು ಸೌಜನ್ಯಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮಗುವನ್ನು ಮುದಗಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.