ಮಂಡ್ಯ : ಮಂಡ್ಯದಲ್ಲಿ ನಿನ್ನೆ ಘೋರವಾದ ಘಟನೆ ನಡೆದಿದ್ದು, ಫೋಟೋ ತೆಗೆದುಕೊಳ್ಳಲು ಹೋಗಿ ದುರಂತ ಒಂದು ಸಂಭವಿಸಿದ್ದು, ಫೋಟೋ ತೆಗೆಸಿಕೊಳ್ಳೋವಾಗಲೇ ಆಯತಪ್ಪಿ ಬಿದ್ದು ಕಾವೇರಿ ನದಿಯಲ್ಲಿ ವ್ಯಕ್ತಿಯೊಬ್ಬರು ಕೊಚ್ಚಿಕೊಂಡು ಹೋಗಿರುವ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಸರ್ವಧರ್ಮ ಆಶ್ರಮದ ಬಳಿ ಈ ಒಂದು ಘಟನೆ ನಡೆದಿದ್ದು, ನೋಡುತ್ತಿದ್ದಂತೆ ಮಹೇಶ್ (36) ಆಯತಪ್ಪಿ ಕಾವೇರಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಮೈಸೂರಿನಲ್ಲಿ ಮಹೇಶ್ ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ನಿನ್ನೆ ಸಂಜೆ ಸ್ನೇಹಿತರೊಂದಿಗೆ ಕೆ ಆರ್ ಎಸ್ ಡ್ಯಾಮ್ ಗೆ ಬಂದಿದ್ದರು.ಫೋಟೋ ತೆಗೆಸಿಕೊಳ್ಳುವಾಗ ಮಹೇಶ್ ಆಯತಪ್ಪಿ ನದಿಗೆ ಬಿದ್ದಿದ್ದಾರೆ.ಸದ್ಯ ನದಿಯಲ್ಲಿ ಕೊಚ್ಚಿ ಹೋದ ಮಹೇಶ್ ಮೃತ ದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ. ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.