ಮಂಡ್ಯ : ಮಂಡ್ಯದಲ್ಲಿ ದಾರುಣ ಘಟನೆ ಒಂದು ನಡೆದಿದ್ದು, ಎಮ್ಮೆ ತೊಳೆಯುವ ವೇಳೆ ಬಾವಿಗೆ ಬಿದ್ದು ದಂಪತಿ ಸಾವನ್ನಪ್ಪಿರುವ ಘಟನೆ ಅರೆಬೊಪ್ಪನಹಳ್ಳಿ ಎಂಬ ಗ್ರಾಮದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆ ಕೆ.ಆರ್‌ಪೇಟೆ ತಾಲೂಕಿನ ಗ್ರಾಮದಲ್ಲಿ ಎಮ್ಮೆ ತೊಳೆಯಲು ಹೋದಾಗ ವಸಂತಮ್ಮ(65) ಹಾಗು ಕಾಳೇಗೌಡ(70) ಬಾವಿಗೆ ಬಿದ್ದು ಸಾವನ್ನಪ್ಪಿರುವ ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ. ಎಮ್ಮೆ ತೊಳೆಯಲು ಹೋಗಿದ್ದ ವೇಳೆ ತೆರದ ಬಾವಿಗೆ ಪತ್ನಿಯನ್ನ ರಕ್ಷಿಸಲು ಹೋದ ಪತಿ ಕೂಡ ಸಾವನ್ನಪ್ಪಿದ್ದಾರೆ. ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.