ಧಾರವಾಡ : ಇಂದು ಧಾರವಾಡದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಆಟ ಆಡುತ್ತಿರುವಾಗಲೇ ಕಾಲು ಜಾರಿ ಕೆರೆಗೆ ಬಿದ್ದು ಇಬ್ಬರು ಅವಳಿ ಮಕ್ಕಳು ಸಾವನ್ನಪ್ಪಿರುವ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಿ ನಾರಾಯಣಪುರ ಗ್ರಾಮದ ಬಳಿ ಈ ಘಟನೆ ನಡೆದಿದೆ.
ಮೃತ ಮಕ್ಕಳನ್ನು ಮುದಸ್ಸೀರ್ ಮತ್ತು ಮುಜಮ್ಮಿಲ್ ಎಂದು ಗುರುತಿಸಲಾಗಿದೆ. ಇಂದು ಇಬ್ಬರೂ ಮಕ್ಕಳು ಮನೆಯ ಸಮೀಪದಲ್ಲಿದ್ದ ಕೆರೆಯ ಬಳಿ ಆಟವಾಡಲು ತೆರಳಿದ್ದಾರೆ. ಈ ವೇಳೆ ಕಾಲು ಜಾರಿ ಕೆರೆಗೆ ಬಿದ್ದು ಕರೆಯಲ್ಲಿ ಮುಳುಗಿ ಅವಳಿ ಮಕ್ಕಳು ಸಾವನ್ನಪ್ಪಿದ್ದಾರೆ. ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.