ಚಿಕ್ಕಮಗಳೂರು : ಚಿಕ್ಕಮಗಳೂರಲ್ಲಿ ಘೋರವಾದ ದುರಂತ ಸಂಭವಿಸಿದ್ದು, ಭದ್ರಾ ಡ್ಯಾಮ್ ವೀಕ್ಷಣೆಗೆ ಬಂದಿದ್ದ ವೇಳೆ ತಾಯಿಯ ಕಣ್ಣೆದುರಲ್ಲೇ ಯುವಕನೊಬ್ಬ ಭದ್ರಾ ಹಿನ್ನಿರಿನಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ ಈ ಘಟನೆ ನಡೆದಿದೆ.
ತಾಯಿಯ ಕಣ್ಣೆದುರೇ ಶಿವಮೊಗ್ಗ ಮೂಲದ ಗೌತಮ್ (19) ಎಂಬ ಯುವಕ ಸಾವನ್ನಪ್ಪಿದ್ದಾನೆ.ಮಾರಿ ಹಬ್ಬ ನಂತರ ಭದ್ರಾ ಹಿನ್ನಿರು ವೀಕ್ಷಣೆಗೆ ಎಂದು ಬಂದಿದ್ದರು.ತಾಯಿಯ ಜೊತೆ ಗೌತಮ್ ಬಂದಿದ್ದ ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸ ಪಟ್ಟು ಶವ ಹೊರಗಡೆ ತೆಗೆದಿದ್ದಾರೆ. ಎನ್.ಆರ್. ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.