ಬೀದರ್ : ಬೀದರ್ ನಲ್ಲಿ ಘೋರ ದುರಂತ ಸಂಭವಿಸಿದ್ದು, ಹೊಸ ಮನೆಯ ನಿರ್ಮಾಣ ಮಾಡುತ್ತಿರುವಾಗ ಮನೆಗೆ ನೀರು ಹಾಕಲು ಪಂಪ್ ಸೆಟ್ ಆನ್ ಮಾಡಲು ಹೋದಾಗ ವಿದ್ಯುತ್ ತಗುಲಿ ಸ್ಥಳದಲ್ಲಿಯೇ 8ನೇ ತರಗತಿಯ ಬಾಲಕಿಯೊಬ್ಬಳು ಸಾವನ್ನಪ್ಪಿರುವ ಘಟನೆ ಹುಲಸೂರ ತಾಲ್ಲುಕಿನ ತೋಗಲೂರ ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ಪಲ್ಲವಿ ರಾಜೇಂದ್ರ ದೇವಗೊಂಡ (15) ಎಂದು ಗುರುತಿಸಲಾಗಿದೆ. ಸೋಮವಾರ ಬೆಳಗ್ಗೆ ಹೊಸ ಮನೆಗೆ ನೀರು ಹಾಕಲು ನೀರಿನ ಮೋಟರ್ ಆನ್ ಮಾಡಲು ಹೋದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಆಘಾತದಿಂದ ಈ ಘಟನೆ ನಡೆದಿದೆ ಎಂದು ಪೋಲಿಸ್ ಇಲಾಖೆಯಿಂದ ತಿಳಿದು ಬಂದಿದೆ. ಈ ಕುರಿತು ಹುಲಸೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.