ರಾಯಚೂರು : ರಾಯಚೂರಿನಲ್ಲಿ ಭಾರಿ ಅನಾಹುತ ಒಂದು ತಪ್ಪಿದ್ದು ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಟ್ರ್ಯಾಕ್ಟರ್ ಚಾಲಕನೊಬ್ಬ ಟ್ರಾಕ್ಟರ್ ಓಡಿಸಿದ್ದಾನೆ. ಈ ವೇಳೆ ಟ್ರ್ಯಾಕ್ಟರ್ ಹಳ್ಳದ ಮಧ್ಯದಲ್ಲಿ ಸಿಲುಕಿಕೊಂಡಿದ್ದು ಟ್ಯಾಕ್ಟರ್ ನಲ್ಲಿದ್ದ 15 ಜನರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನಲ್ಲಿ ನಡೆದಿದೆ.
ಹೌದು ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಟ್ರ್ಯಾಕ್ಟರ್ ಸಿಲುಕಿದ್ದು ಅದೃಷ್ಟವಶಾತ್ 15 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಯಚೂರಿನ ಮಸ್ಕಿ ತಾಲೂಕಿನಲ್ಲಿ ಈ ಒಂದು ಘಟನೆ ನಡೆದಿದೆ. ತುಂಬಿ ಹರಿಯುತ್ತಿದ್ದ ಹಳ್ಳ ದಟ್ಟವಾಗ ಈ ಒಂದು ಘಟನೆ ನಡೆದಿದೆ. ಪ್ರಾಣಭೀತಿಯಲ್ಲಿ ಟ್ರ್ಯಾಕ್ಟರ್ ನಲ್ಲಿದ್ದ ಮಹಿಳೆಯರು ಕಿರುಚಾಡಿದ್ದಾರೆ. ತಕ್ಷಣ ಅಲ್ಲಿಯೆ ಇದಂತಹ ಸ್ಥಳೀಯರು ಕಾಪಾಡಿದ್ದಾರೆ.