ತುಮಕೂರು : ತುಮಕೂರಲ್ಲಿ ಘೋರವಾದ ದುರಂತ ಸಂಭವಿಸಿದ್ದು, ಲೋರಸ್ ಬಯೋ ಕಂಪನಿಯಲ್ಲಿ ಕೆಮಿಕಲ್ ಸಂಪ್ ಕ್ಲೀನ್ ಮಾಡುವಾಗ ಉಸಿರುಗಟ್ಟಿ ಇಬ್ಬರು ಸಾವನಪ್ಪಿದ್ದಾರೆ. ತುಮಕೂರಿನ ಲೊರಸ್ ಬಯೋ ಕಂಪನಿಯಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ.
ತುಮಕೂರಿನ ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಲೊರಸ್ ಬಯೋ ಕಂಪನಿಯಲ್ಲಿ ಸಂಪ್ ನಲ್ಲಿ ಉಸಿರುಗಟ್ಟಿ ವೆಂಕಟೇಶ್ (32) ಹಾಗು ಪ್ರತಾಪ್ (23) ಸಾವನಪ್ಪಿದ್ದಾರೆ. ವೆಂಕಟೇಶ್ ಫ್ಯಾಕ್ಟರಿಯನ್ನು ನಾಲ್ವರು ಸಂಪ್ ಸ್ವಚ್ಛಗೊಳಿಸುತ್ತಿದ್ದರು. ಕಾರ್ಖಾನೆಯ ಸಂಪ್ ಕ್ಲೀನಿಂಗ್ ಗೆ ಮಂಜುನಾಥ್ ಮೊದಲು ಇಳಿದಿದ್ದಾರೆ.. ಈ ವೇಳೆ ಉಸಿರುಗಟ್ಟಿ ಮಂಜುನಾಥ್ ಸಂಪನೊಳಗೆ ಸಿಲುಕಿದ್ದಾರೆ.
ಇದನ್ನು ಕಂಡ ಫ್ಯಾಕ್ಟರಿ ಸೆಕ್ಯೂರಿಟಿ ಗಾರ್ಡ್ ಪ್ರತಾಪ್ ಹಾಗೂ ಕಾರ್ಮಿಕರಾದ ವೆಂಕಟೇಶ್ ಯುವರಾಜ್ ಸಹ ಒಳಗೆ ಇಳಿದಿದ್ದರು. ಸಂಪ್ ಒಳಗೆ ಇಳಿದಿದ್ದ ನಾಲ್ವರು ಸಹ ಪ್ರಜ್ಞೆ ತಪ್ಪಿದ್ದಾರೆ. ತಕ್ಷಣ ಫ್ಯಾಕ್ಟರಿಯಲ್ಲಿದ್ದ ಇತರರಿಂದ ನಾಲ್ವರ ರಕ್ಷಣೆಗೆ ಯತ್ನಿಸಲಾಗಿದೆ. ಬಳಿಕ ನಾಲ್ವರನ್ನು ರಕ್ಷಣೆ ಮಾಡಿ ಸಿದ್ದಗಂಗಾ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ವೇಳೆ ಮಾರ್ಗ ಮಧ್ಯೆ ಸೆಕ್ಯೂರಿಟಿ ಗಾರ್ಡ್ ಪ್ರತಾಪ್ ಮತ್ತು ಕಾರ್ಮಿಕ ವೆಂಕಟೇಶ್ ಸಾವನಪ್ಪಿದ್ದಾರೆ. ಅಸ್ವಸ್ಥ ಮಂಜುನಾಥ್ ಮತ್ತು ಯುವರಾಜ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ತುಮಕೂರಿನ ಕೋರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.