ದಕ್ಷಿಣಕನ್ನಡ : ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ಹಿಂದೆ ಸಾಮಾಜಿಕ ಹೋರಾಟಗಾರ ಸ್ನೇಹ ಮೈ ಕೃಷ್ಣ ಸೌಜನ್ಯ ಅಳಮಾವ ವಿಠಲ ಗೌಡನೇ ಈ ಒಂದು ಕೊಲೆ ಮಾಡಿದ್ದ ಎಂಬ ಗಂಭೀರವಾದ ಆರೋಪ ಮಾಡಿದ್ದರು. ಈ ವಿಚಾರವಾಗಿ ಇದೀಗ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಟ ವಿರುದ್ಧ ಇದೀಗ ದೂರು ದಾಖಲಾಗಿದೆ.
ವೆಂಕಪ್ಪ ಕೋಟ್ಯಾನ್ ಎಂವುವರಿಂದ ಸ್ನೇಹಮಯಿ ಕೃಷ್ಣ ವಿರುದ್ಧ ದೂರು ದಾಖಲಾಗಿದೆ. ಸೌಜನ್ಯಳನ್ನು ಮಾವ ವಿಠ್ಠಲಗೌಡ ಕೊಂದಿದ್ದಾನೆ ಎಂದು ಸ್ನೇಹಮಯಿ ಕೃಷ್ಣ ಗಂಭೀರವಾಗಿ ಆರೋಪಿಸಿದ್ದರು. ಹಾಗಾಗಿ ವೆಂಕಪ್ಪ ಬೆಳ್ತಂಗಡಿ ಠಾಣೆಗೆ ದೂರು ನೀಡಲಾಗಿದ್ದು, ಸೌಜನ್ಯಗಳಿಗೆ ನ್ಯಾಯ ಒದಗಿಸುವ ಹೋರಾಟದ ದಾರಿ ತಪ್ಪಿಸಲು ಸ್ನೇಹಮಯಿ ಕೃಷ್ಣ ದುರುದ್ದೇಶ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ ಈ ರೀತಿಯ ಹೇಳಿಕೆ ಹಿಂದೆ ಯಾರಿದ್ದಾರೆ ಎಂಬುವುದರ ಬಗ್ಗೆ ತನಿಖೆಯಾಗಬೇಕು ಸ್ನೇಹಮಯಿ ಕೃಷ್ಣ ಅವರನ್ನು ಕರೆಸಿ ವಿಚಾರಣೆ ನಡೆಸುವಂತೆ ಒತ್ತಾಯಿಸಿದ್ದಾರೆ.