ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದ ಮುಂಬಾಳು ತಿರುವಿನಲ್ಲಿ ಇಂದು ಬೆಳ್ಳಂ ಬೆಳಿಗ್ಗೆ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಕ್ಯಾಂಟರ್ ನಡುವೆ ಅಪಘಾತವಾಗಿದೆ. ಈ ವೇಳೆ ಬಸ್ಸಿನಲ್ಲಿ ಶಾಲಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು ಎಂದು ತಿಳಿದು ಬಂದಿದೆ.
ಬಸ್ಸಿನ ಚಾಲಕ ಹಾಗೂ ನಾಲ್ಕೈದು ವಿದ್ಯಾರ್ಥಿಗಳಿಗೆ ತೀವ್ರತರವಾದ ಗಾಯಗಳಾಗಿದ್ದು, ತಕ್ಷಣ ಮುಂಬಾಳು ಪ್ರದೇಶದ ಸ್ಥಳೀಯರು ಸಾಗರದ ಮರ್ಕಜ್ ಶಾಲೆಗೆಂದು ವಿದ್ಯಾರ್ಥಿಗಳನ್ನು ಕರೆದು ಕೊಂಡು ಬರುತ್ತಿದ್ದ ಬಸ್ಸಿನಲ್ಲಿ ಬರುವಾಗ ಅಪಘಾತ ಸಂಭಾವಿಸಿದೆ. ತಕ್ಷಣ ಗಾಯಾಳುಗಳನ್ನು ಆನಂದಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಮಯದಲ್ಲಿ ಮುಂಬಾಳು ಹಿಸಾಬಾ ಸಮಿತಿಯ ಉಸ್ಮಾನ್ ಹಾಗೂ ಮರ್ಕಜ್ ಬಸ್ಸಿನ ಚಾಲಕ ಜಿಯಾವುಲ್ಲಾ ಅವರ ಮಾನವೀಯತೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರದಿ: ರಫೀಕ್ ಎಂ ಬ್ಯಾರಿ, ಸಾಗರ