ಕಲಬುರ್ಗಿ : ಸಾಮಾನ್ಯವಾಗಿ ಯಾವುದೇ ಆಸ್ಪತ್ರೆಗಳಿರಲಿ ಒಪಿಡಿಯಲ್ಲಿ ಯಾವುದೇ ರೋಗಿಗಳು ಬಂದರೆ ಅವರ ದಾಖಲಾತಿ ಹೆಸರು, ಮೊಬೈಲ್ ನಂಬರ್, ವಿಳಾಸ ಬರೆದುಕೊಳ್ಳುವುದನ್ನು ನೋಡಿದ್ದೇವೆ. ಆದರೆ ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕು ಆಸ್ಪತ್ರೆಯಲ್ಲಿ ಅಲ್ಲಿನ ಸಿಬ್ಬಂದಿಗಳು ಓ ಪಿ ಡಿ ದಾಖಲಾತಿ ಪುಸ್ತಕದಲ್ಲಿ ಸಿನಿಮಾ ಹಾಡುಗಳನ್ನು ಬರೆದಿದ್ದಾರೆ. ಇಂದು ದಿಢೀರ್ ಎಂದು ಲೋಕಾಯುಕ್ತ ಎಸ್ ಪಿ ಸಿದ್ದರಾಜು ಆಸ್ಪತ್ರೆಗೆ ಭೇಟಿ ನೀಡಿದಾಗ ಈ ಒಂದು ಅವ್ಯವಸ್ಥೆ ಕಂಡು ದಂಗಾಗಿದ್ದಾರೆ.
ಹೌದು ತಾಲೂಕು ಆಸ್ಪತ್ರೆಯ ಒಪಿಡಿ ದಾಖಲಾತಿ ಪುಸ್ತಕದಲ್ಲಿ ಸಿನಿಮಾ ಹಾಡು ಬರೆದಿದ್ದು, ‘ಪೂಜಿಸಲೆಂದು ಹೂಗಳ ತಂದೆ’ ಎಂದು ಆಸ್ಪತ್ರೆಯ ಸಿಬ್ಬಂದಿಗಳು ಪುಸ್ತಕದ ದಾಖಲಾತಿಯಲ್ಲಿ ಈ ಹಾಡು ಬರೆದಿದ್ದಾರೆ.ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕು ಆಸ್ಪತ್ರೆ ಪುಸ್ತಕದಲ್ಲಿ ಸಿಬ್ಬಂದಿಗಳು ಈ ಹಾಡು ಬರೆದಿದ್ದಾರೆ.ಆಸ್ಪತ್ರೆಗೆ ದಿಡೀರ್ ಭೇಟಿ ನೀಡಿದ್ದಾಗ ಲೋಕಾಯುಕ್ತ ಎಸ್ಪಿ ಸಿದ್ದರಾಜು ಆಸ್ಪತ್ರೆಯ ಕರ್ಮ ಕಾಂಡ ಬಯಲಾಗಿದೆ.
ತಾಲೂಕು ಆಸ್ಪತ್ರೆಯ ಬೇಜವಾಬ್ದಾರಿತನ ಕಂಡು ದಂಗಾಗಿದ್ದಾರೆ.. ಇದು ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಕ್ಷೇತ್ರದ ಆಸ್ಪತ್ರೆನಾ? ಎಂದು ಸಹಜವಾಗಿ ಶಾಕ್ ಗೆ ಒಳಗಾಗಿದ್ದಾರೆ. ತಾಲೂಕು ಆಸ್ಪತ್ರೆಯ ಅವ್ಯವಸ್ಥೆ ಕಂಡು ಶಾಕ್ ಆಗಿದ್ದಾರೆ ಈ ವೇಳೆ ಆಸ್ಪತ್ರೆಯ ಸಿಬ್ಬಂದಿಗಳಿಗೆ ಲೋಕಾಯುಕ್ತ ಎಸ್ಪಿ ಕ್ಲಾಸ್ ತೆಗೆದುಕೊಂಡಿದ್ದಾರೆ.