ಶಿವಮೊಗ್ಗ : ಶಿವಮೊಗ್ಗದಲ್ಲಿ ಭಾರಿ ಪ್ರಮಾಣದಲ್ಲಿ ಭೂಕುಸಿತಗೊಂಡಿದ್ದು, ಕುಂದಗಲ್ ಬಳಿ ಭಾರಿ ಪ್ರಮಾಣದಲ್ಲಿ ಬಿರುಕು ಬಿಟ್ಟು ಭೂಮಿ ಕುಸಿತವಾಗಿದೆ. ಹೊಸನಗರ ತಾಲೂಕಿನ ಅರಮನೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದಗಲ್ ನಲ್ಲಿ ಈ ಘಟನೆ ಸಂಭವಿಸಿದೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕುಂದಗಲ ಗ್ರಾಮದಲ್ಲಿ ಒಂದು ಅಡಿ ಕುಸಿತ ಕಂಡಿದ್ದ ಭೂಮಿಯಲ್ಲಿ ಮತ್ತೆ ಎರಡು ಅಡಿ ಕುಸಿತವಾಗಿದೆ. ಎರಡು ಅಡಿ ಆಳಕ್ಕೆ ಭೂಮಿ ಕುಸಿದಿವೆ.ಗ್ರಾಮದ ರಸ್ತೆಯು ಸೇರಿದಂತೆ ಭಾರಿ ಪ್ರಮಾಣದಲ್ಲಿ ಭೂಮಿ ಕುಸಿತವಾಗಿದೆ. ಸ್ಥಳಕ್ಕೆ ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ಅಲ್ಲದೆ ಬಹುವಿಜ್ಞಾನ ಮತ್ತು ಕಂದಾಯ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ.