Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸುಪ್ರೀಂ ಕೋರ್ಟ್ ವ್ಯಾಜ್ಯಗಳ ಇತ್ಯರ್ಥಕ್ಕೆ ಐತಿಹಾಸಿಕ ಹೆಜ್ಜೆ : ಆಗಸ್ಟ್ 21 ರಿಂದ ಮೂರು ದಿನಗಳ ಕಾಲ ವಿಶೇಷ ಅಭಿಯಾನ

03/05/2026 6:39 AM

BREAKING : ಶೃಂಗೇರಿ ಮರು ಮತ ಎಣಿಕೆಯಲ್ಲಿ ಮಹಾ ತಿರುವು: ಶಾಸಕ ರಾಜೇಗೌಡರಿಗೆ ಬಿಗ್ ಶಾಕ್.!

03/05/2026 6:33 AM

ರಸ್ತೆ ಮೇಲಿನ ‘ಜೀಬ್ರಾ ಕ್ರಾಸಿಂಗ್’ ಕಪ್ಪು-ಬಿಳಿ ಬಣ್ಣದಲ್ಲೇ ಇರುವುದೇಕೆ? ಹಳದಿ ಬಣ್ಣವನ್ನೇಕೆ ಬಳಸಲ್ಲ? ಇಲ್ಲಿದೆ ಅದರ ಹಿಂದಿನ ವೈಜ್ಞಾನಿಕ ರಹಸ್ಯ!

03/05/2026 6:32 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಶೃಂಗೇರಿ ಮರು ಮತ ಎಣಿಕೆಯಲ್ಲಿ ಮಹಾ ತಿರುವು: ಶಾಸಕ ರಾಜೇಗೌಡರಿಗೆ ಬಿಗ್ ಶಾಕ್.!
KARNATAKA

BREAKING : ಶೃಂಗೇರಿ ಮರು ಮತ ಎಣಿಕೆಯಲ್ಲಿ ಮಹಾ ತಿರುವು: ಶಾಸಕ ರಾಜೇಗೌಡರಿಗೆ ಬಿಗ್ ಶಾಕ್.!

By kannadanewsnow5703/05/2026 6:33 AM

ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶದ ಅಂತಿಮ ಚಿತ್ರಣ ಈಗ ಕುತೂಹಲದ ಘಟ್ಟಕ್ಕೆ ಬಂದು ನಿಂತಿದೆ. ಹೈಕೋರ್ಟ್ ನಿರ್ದೇಶನದಂತೆ ನಡೆದ ಅಂಚೆ ಮತಗಳ ಮರು ಎಣಿಕೆಯಲ್ಲಿ ಶಾಸಕ ರಾಜೇಗೌಡ ಅವರ ಮತಗಳ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ.

ಶನಿವಾರ ಸಂಜೆ ಆರಂಭವಾದ ಮತ ಎಣಿಕೆ ಪ್ರಕ್ರಿಯೆಯು ಮಧ್ಯರಾತ್ರಿಯವರೆಗೂ ಮುಂದುವರಿಯಿತು. ಈ ವೇಳೆ 2023ರ ಚುನಾವಣೆಯ ಸಮಯದಲ್ಲಿ ‘ಸಿಂಧು’ ಎಂದು ಪರಿಗಣಿಸಲಾಗಿದ್ದ ಹಲವು ಮತಗಳು ಈಗ ‘ಅಸಿಂಧು’ ಎಂದು ಘೋಷಿಸಲ್ಪಟ್ಟಿವೆ.

ಈ ಹಿಂದೆ 569 ಅಂಚೆ ಮತಗಳನ್ನು ಪಡೆದಿದ್ದ ರಾಜೇಗೌಡರ ಪಟ್ಟಿಯಿಂದ ಬರೋಬ್ಬರಿ 255 ಮತಗಳು ಕಡಿತಗೊಂಡಿವೆ. ಮತಪತ್ರಗಳಲ್ಲಿ ಇಬ್ಬರು ಅಭ್ಯರ್ಥಿಗಳ ಹೆಸರಿನ ಮುಂದೆ ‘ಡಬಲ್ ಟಿಕ್’ ಮಾಡಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಡಿ.ಎನ್. ಜೀವರಾಜ್ ಅವರಿಗೆ ಬಂದಿದ್ದ 692 ಅಂಚೆ ಮತಗಳಲ್ಲಿ ಕೇವಲ 2 ಮತಗಳು ಮಾತ್ರ ತಿರಸ್ಕೃತಗೊಂಡಿವೆ.

ಕಾಂಗ್ರೆಸ್ ಆಕ್ರೋಶ ಮತ್ತು ಟ್ಯಾಂಪರಿಂಗ್ ಆರೋಪ

ಮರು ಎಣಿಕೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್ ಪಾಳಯದಲ್ಲಿ ಆಕ್ರೋಶ ಭುಗಿಲೆದ್ದಿದೆ. ಕಾಂಗ್ರೆಸ್ ಮುಖಂಡ ಸುದೀರ್ ಕುಮಾರ್ ಮುರೋಳಿ ಅವರು ಗಂಭೀರ ಆರೋಪ ಮಾಡಿದ್ದು, ಬಿಜೆಪಿ ಅಭ್ಯರ್ಥಿ ಮತ್ತು ಅಂದಿನ ಚುನಾವಣಾಧಿಕಾರಿ ಮತಗಳನ್ನು ಟ್ಯಾಂಪರಿಂಗ್ (ತಿದ್ದುಪಡಿ) ಮಾಡಿದ್ದಾರೆ ಎಂದು ದೂರಿದ್ದಾರೆ. ರಾಜೇಗೌಡರ ಮತಪತ್ರಗಳಲ್ಲಿ ಉದ್ದೇಶಪೂರ್ವಕವಾಗಿ ಮತ್ತೊಂದು ಟಿಕ್ ಹಾಕಿ ಅವುಗಳನ್ನು ಅಸಿಂಧುಗೊಳಿಸಲಾಗಿದೆ ಎಂಬುದು ಕಾಂಗ್ರೆಸ್ ವಾದ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಚುನಾವಣಾ ಅಧಿಕಾರಿಗಳು, “ನಾವು ಸಂಪೂರ್ಣವಾಗಿ ಹೈಕೋರ್ಟ್ ಮಾರ್ಗಸೂಚಿ ಮತ್ತು ಚುನಾವಣಾ ಆಯೋಗದ ಹ್ಯಾಂಡ್ ಬುಕ್ ನಿಯಮಗಳ ಅನ್ವಯವೇ ಎಣಿಕೆ ಮಾಡಿದ್ದೇವೆ. ಸಿಂಧು ಮತ್ತು ಅಸಿಂಧು ಮತಗಳ ನಿರ್ಧಾರದಲ್ಲಿ ಯಾವುದೇ ಪಕ್ಷಪಾತ ನಡೆದಿಲ್ಲ. ಅಂತಿಮ ವರದಿಯನ್ನು ಆಯೋಗಕ್ಕೆ ಸಲ್ಲಿಸಲಾಗಿದೆ,” ಎಂದು ತಿಳಿಸಿದ್ದಾರೆ.

BREAKING: A major turning point in the Sringeri recount: Big shock for MLA Rajegowda!
Share. Facebook Twitter LinkedIn WhatsApp Email

Related Posts

ಸುಪ್ರೀಂ ಕೋರ್ಟ್ ವ್ಯಾಜ್ಯಗಳ ಇತ್ಯರ್ಥಕ್ಕೆ ಐತಿಹಾಸಿಕ ಹೆಜ್ಜೆ : ಆಗಸ್ಟ್ 21 ರಿಂದ ಮೂರು ದಿನಗಳ ಕಾಲ ವಿಶೇಷ ಅಭಿಯಾನ

03/05/2026 6:39 AM2 Mins Read

BIG NEWS : ಮೇ 20 ರಿಂದ ರಾಜ್ಯಾದ್ಯಂತ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ : ಬಸ್ ರಸ್ತೆಗಿಳಿಯೋದು ಅನುಮಾನ.!

03/05/2026 6:25 AM1 Min Read

BIG NEWS : ಜನಸಾಮಾನ್ಯರಿಗೆ ಬಿಗ್ ಶಾಕ್ : ಅಡುಗೆ ಎಣ್ಣೆ ದರದಲ್ಲಿ ಭಾರಿ ಏರಿಕೆ | Cooking oil price hike

03/05/2026 6:21 AM2 Mins Read
Recent News

ಸುಪ್ರೀಂ ಕೋರ್ಟ್ ವ್ಯಾಜ್ಯಗಳ ಇತ್ಯರ್ಥಕ್ಕೆ ಐತಿಹಾಸಿಕ ಹೆಜ್ಜೆ : ಆಗಸ್ಟ್ 21 ರಿಂದ ಮೂರು ದಿನಗಳ ಕಾಲ ವಿಶೇಷ ಅಭಿಯಾನ

03/05/2026 6:39 AM

BREAKING : ಶೃಂಗೇರಿ ಮರು ಮತ ಎಣಿಕೆಯಲ್ಲಿ ಮಹಾ ತಿರುವು: ಶಾಸಕ ರಾಜೇಗೌಡರಿಗೆ ಬಿಗ್ ಶಾಕ್.!

03/05/2026 6:33 AM

ರಸ್ತೆ ಮೇಲಿನ ‘ಜೀಬ್ರಾ ಕ್ರಾಸಿಂಗ್’ ಕಪ್ಪು-ಬಿಳಿ ಬಣ್ಣದಲ್ಲೇ ಇರುವುದೇಕೆ? ಹಳದಿ ಬಣ್ಣವನ್ನೇಕೆ ಬಳಸಲ್ಲ? ಇಲ್ಲಿದೆ ಅದರ ಹಿಂದಿನ ವೈಜ್ಞಾನಿಕ ರಹಸ್ಯ!

03/05/2026 6:32 AM

​ಬಂಗಾಳ ಚುನಾವಣೆ: ‘ಎಕ್ಸಿಟ್ ಪೋಲ್ ಕೇವಲ ಪ್ರಚಾರವಷ್ಟೇ!’: ಸಮೀಕ್ಷೆ ತಳ್ಳಿಹಾಕಿದ ದೀದಿ, TMC ಗೆ 200+ ಸೀಟುಗಳ ಭವಿಷ್ಯ!

03/05/2026 6:26 AM
State News
KARNATAKA

ಸುಪ್ರೀಂ ಕೋರ್ಟ್ ವ್ಯಾಜ್ಯಗಳ ಇತ್ಯರ್ಥಕ್ಕೆ ಐತಿಹಾಸಿಕ ಹೆಜ್ಜೆ : ಆಗಸ್ಟ್ 21 ರಿಂದ ಮೂರು ದಿನಗಳ ಕಾಲ ವಿಶೇಷ ಅಭಿಯಾನ

By kannadanewsnow5703/05/2026 6:39 AM KARNATAKA 2 Mins Read

ಬೆಂಗಳೂರು : ಸರ್ವೊಚ್ಚ ನ್ಯಾಯಾಲಯದ (ಸುಪ್ರಿಂ ಕೋರ್ಟ) ಅಂಗಳ ತಲುಪಿದ ಯಾವುದೇ ಬಗೆಯ ವ್ಯಾಜ್ಯಗಳ ಪರಿಹಾರಕ್ಕಾಗಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು…

BREAKING : ಶೃಂಗೇರಿ ಮರು ಮತ ಎಣಿಕೆಯಲ್ಲಿ ಮಹಾ ತಿರುವು: ಶಾಸಕ ರಾಜೇಗೌಡರಿಗೆ ಬಿಗ್ ಶಾಕ್.!

03/05/2026 6:33 AM

BIG NEWS : ಮೇ 20 ರಿಂದ ರಾಜ್ಯಾದ್ಯಂತ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ : ಬಸ್ ರಸ್ತೆಗಿಳಿಯೋದು ಅನುಮಾನ.!

03/05/2026 6:25 AM

BIG NEWS : ಜನಸಾಮಾನ್ಯರಿಗೆ ಬಿಗ್ ಶಾಕ್ : ಅಡುಗೆ ಎಣ್ಣೆ ದರದಲ್ಲಿ ಭಾರಿ ಏರಿಕೆ | Cooking oil price hike

03/05/2026 6:21 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.