ಬೆಂಗಳೂರು : ಕೆಂಪೇಗೌಡ ಏರ್ಪೋರ್ಟ್ ರಾಮೇಶ್ವರಂ ಕೆಫೆ ತಿಂಡಿಯಲ್ಲಿ ಜಿರಳೆ ಪತ್ತೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನ ಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಗ್ರಾಹಕ ಖರೀದಿಸಿದ ಪೊಂಗಲ್ ನಲ್ಲಿ ಜಿರಳೆ ಒಂದು ಪತ್ತೆಯಾಗಿದೆ.
ಕೆಫೆಯಲ್ಲಿ ಪ್ರಯಾಣಿಕ ಲೋಕನಾಥ್ ಎನ್ನುವವರು ಪೊಂಗಲ್ ಖರೀದಿಸಿದ್ದರು. ಪೊಂಗಲ್ ತಿನ್ನುತ್ತಿರುವಾಗ ತಿಂಡಿಯಲ್ಲಿ ಜಿರಳೆ ಕಾಣಿಸಿಕೊಂಡಿದೆ. ಜಿರಳೆ ಪತ್ತೆಯ ಬಗ್ಗೆ ಲೋಕನಾಥ್ ಅವರು ಹೋಟೆಲಿ ಸಿಬ್ಬಂದಿಗಳಿಗೆ ಪ್ರಶ್ನಿಸಿದ್ದಾರೆ.
ಈ ವೇಳೆ ಕೈಮುಗಿದು ತಪ್ಪಾಯಿತು ಎಂದು ಹೋಟೆಲ್ ಸಿಬ್ಬಂದಿಗಳು ಕೇಳಿಕೊಂಡಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ಇತರೆ ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದು, ಇತ್ತೀಚಿಗೆ ಅಷ್ಟೇ ಏರ್ಪೋರ್ಟ್ ನಲ್ಲಿ ರಾಮೇಶ್ವರಂ ಕೆಫೆ ಓಪನ್ ಆಗಿದೆ.