ಹಾವೇರಿ : ಜಿಲ್ಲೆಯ ರಾಣೆಬೆನ್ನೂರಿನ ನಾಡಿಗೇರ್ ಓಣಿಯ ಮನೆಯ ಶೌಚಾಲಯದೊಳಗೆ ಇಂದು ಬೆಳಗ್ಗೆ ಚಿರತೆ ಕಂಡುಬಂತು. ಪಿ.ಟಿ.ಕಾಕಿ ಎಂಬವರ ಮನೆಯ ಶೌಚಾಲಯದಲ್ಲಿ ಚಿರತೆ ಅವಿತು ಕುಳಿತಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಡ್ರೋನ್ ಕ್ಯಾಮೆರಾ ಮತ್ತು ಬಲೆ ಬಳಸಿ ಸೆರೆ ಹಿಡಿಯುವ ಪ್ರಯತ್ನ ಸಾಗುತ್ತಿದೆ. ಕಾರ್ಯಾಚರಣೆ ತಂಡ ಅರಿವಳಿಕೆ ತಜ್ಞರನ್ನು ಕಾಯುತ್ತಿದ್ದು, ಡಿಎಫ್‌ಒ ಅಬ್ದುಲ್ ಅಜಿಜ್ ಶೇಖ್ ಈ ಕುರಿತು ಪ್ರತಿಕ್ರಿಯಿಸಿದರು. 25ಕ್ಕೂ ಅಧಿಕ ಸಿಬ್ಬಂದಿ, ವಲಯ ಅರಣ್ಯಾಧಿಕಾರಿ, ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಡ್ರೋನ್ ಬಳಸಲಾಗುತ್ತಿದೆ. ಸುತ್ತಲೂ ಬಲೆ ಹಾಕಲಾಗಿದೆ. ಬೋನು ಇರಿಸಲಾಗಿದೆ. ಶೀಘ್ರದಲ್ಲೇ ಚಿರತೆಯನ್ನು ಸೆರೆ ಹಿಡಿಯುತ್ತೇವೆ. ಅರಿವಳಿಕೆ ತಜ್ಞರು ಧಾರವಾಡದಿಂದ ಬರುತ್ತಿದ್ದಾರೆ. ಜನರೂ ಸಹಕರಿಸಬೇಕು ಎಂದು ಅವರು ಹೇಳಿದರು.