ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ಪೋರ್ಟ್ ನ ರನ್ ವೇ ನಲ್ಲಿ ಏಕಾಏಕಿ ಬೃಹತ್ ಬಲೂನ್ ಹಾರಿ ಬಂದಿದೆ. ವಿಮಾನ ಟೇಕ್ ಅಪ್ ಮತ್ತು ಲ್ಯಾಂಡಿಂಗ್ ಪ್ರದೇಶಕ್ಕೆ ಬೃಹತ್ ಬಲೂನ್ ಹಾರಿ ಬಂದಿದೆ.
ಬಿ ಸಿ ಡಿ ಕನ್ಸ್ಟ್ರಕ್ಷನ್ ಎಂಬ ಕಂಪನಿ ಗೆ ಈ ಬೃಹತ್ ಬಲೂನ್ ಸೇರಿದ್ದು ರನ್ ವೇ ನಲ್ಲಿ ವಿಮಾನಗಳ ಹಾರಾಟವಿಲ್ಲದ ಕಾರಣ ಭಾರಿ ಅನಾಹುತ ತಪ್ಪಿದೆ. ಫೆಬ್ರವರಿ 5 ರಂದು ನಡೆದಿರುವ ಘಟನೆ ತಡವಾಗಿ ಬಳಕೆಗೆ ಬಂದಿದೆ. ದಾರ ಕಟ್ ಆಗಿ ರನ್ ವೇ ಕಡೆಗೆ ಬಲೂನ್ ಹಾರಿ ಬಂದಿರುವ ಶಂಕೆ ವ್ಯಕ್ತವಾಗಿದೆ. ಬಿ ಸಿ ಡಿ ಕನ್ಸ್ಟ್ರಕ್ಷನ್ ವಿರುದ್ಧ ಏರ್ಪೋರ್ಟ್ ಭದ್ರತಾ ಸಿಬ್ಬಂದಿ ದೂರು ನೀಡಿದ್ದು ಕೆಂಪೇಗೌಡ ಏರ್ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








