ಕನಕಪುರ : ಕನಕಪುರದಲ್ಲಿ ಕಾಡಾನೆ ಹಿಂಡು ‘BMTC’ ಬಸ್ ತಡೆದು ಅಡ್ಡ ಹಾಕಿರುವ ಘಟನೆ ನಡೆದಿದೆ. ಬಿಎಂಟಿಸಿ ಬಸ್ ಸುತ್ತುವರೆದು ಕಾಡಾನೆಗಳು ತಳ್ಳಿವೆ. ಕಾಡಿನಲ್ಲಿ ಇರಬೇಕಾದಂತಹ ಆನೆಗಳು ಏಕಾಏಕಿ ನಾಡಿಗೆ ಬಂದಿದ್ದು, ಜನರನ್ನು ಆತಂಕಕ್ಕೆ ದೂಡಿವೆ. ಕನಕಪುರದ ಕಗ್ಗಲಿಪುರದಲ್ಲಿ ಈ ಒಂದು ಘಟನೆ ನಡೆದಿದೆ.
ಹೌದು ರಾಮನಗರ ಜಿಲ್ಲೆಯ ಕನಕಪುರದಲ್ಲಿ ಏಕಾಏಕಿ ಐದಾರು ಕಾಡಾನೆಗಳು ಪ್ರತ್ಯಕ್ಷವಾಗಿದ್ದು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಐದಾರು ಆನೆಗಳನ್ನು ಕಂಡು ಕಕ್ಕಾಬಿಕ್ಕಿ ಆಗಿರುವ ಘಟನೆ ನಡೆದಿದೆ.ಐದಾರು ಕಾಡಾನೆಗಳು ಕಂಡು ಬಸ್ ನಲ್ಲಿದ್ದ ಪ್ರಯಾಣಿಕರು ಕಕ್ಕಾಬಿಕ್ಕಿಯಾಗಿದ್ದಾರೆ. ಕೆ ಆರ್ ಮಾರುಕಟ್ಟೆಯಿಂದ ಗುಲ್ಲಹಟ್ಟಿ, ಕಡೆಗೆ ಬಿಎಂಟಿಸಿ ಬಸ್ ಹೊರಟಿತ್ತು.
ಕನಕಪುರ ರಸ್ತೆಯ ಕಗ್ಗಲಿಪುರ ಬಳಿಯ ಗುಲ್ಲಹಟ್ಟಿಯಲ್ಲಿ ಆನೆ ಪ್ರತ್ಯಕ್ಷವಾಗಿದೆ. ಕಾಡಾನೆ ಕಂಡು ಸ್ಥಳೀಯ ಜನರು ಮತ್ತು ಪ್ರಯಾಣಿಕರು ಏಕಾಏಕಿ ಭಯಭೀತರಾಗಿದ್ದಾರೆ ಕೂಡಲೇ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ದೂರು ನೀಡಿದ್ದು ತಕ್ಷಣ ಸ್ಥಳಕ್ಕೆ ಸಿಬ್ಬಂದಿಗಳು ಧಾವಿಸಿದ್ದಾರೆ ಬಳಿಕ ಸಿಬ್ಬಂದಿಗಳು ಬನ್ನೇರುಘಟ್ಟ ಉದ್ಯಾನವನಕ್ಕೆ ಆನೆಯನ್ನು ಕಳುಹಿಸಿದ್ದಾರೆ.