ದಾವಣಗೆರೆ : ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಿಕರು ಸ್ವಲ್ಪದರಲ್ಲೆ ಬಚಾವಾಗಿರುವ ಘಟನೆ ದಾವಣಗೆರೆ ತಾಲೂಕು ಹುಣಸಿಕಟ್ಟೆ ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಈ ಒಂದು ಅವಘಡ ಸಂಭವಿಸಿದೆ.
ಚಲಿಸುತ್ತಿದ್ದ ಕಾರಲ್ಲಿ ಆಕಸ್ಮಿಕ ಬೆಂಕಿಯಿಂದ ಎರ್ಟಿಗಾ ಕಾರೊಂದು ಧಗಧಕನೇ ಹೊತ್ತಿ ಉರಿದಿದೆ. ಗುವಾದಿಂದ ಆಂಧ್ರಪ್ರದೇಶದ ಕಡೆ ತೆರಳುತ್ತಿದ್ದ ಕಾರಿನಲ್ಲಿದ್ದ ನಾಲ್ವರು ಬಚಾವ್ ಆಗಿದ್ದಾರೆ ಕೂಡಲೇ ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಬೆಂಕಿ ನದಿಸುವಲ್ಲಿ ಯಶಸ್ವಿಯಾಯಿತು. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಘಟನೆ ಕುರಿತು ಪ್ರಕರಣ ದಾಖಲಾಗಿದೆ.