ಶಿವಮೊಗ್ಗ : ಶಿವಮೊಗ್ಗದಲ್ಲಿ ಹೃದಯವಿದ್ರಾವಕ ಘಟನೆ ಒಂದು ನಡೆದಿದ್ದು, ಸಾಲಭಾದೆಯಿಂದ ಮನನೊಂದ ದಂಪತಿಗಳು ನೇಣಿಗೆ ಶರಣಾಗಿರುವ ಘಟನೆ ಹಲ್ಯಾಪುರ ಬಳಿ ಕಾಡಿನಲ್ಲಿ ಮರಕೆ ನೇಣು ಬಿಗಿದುಕೊಂಡು ದಂಪತಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಲ್ಯಾಪುರ ಗ್ರಾಮದ ಗುಂಡನಾಯಕ (72) ಲಕ್ಷಮ್ಮ (58) ನೇಣಿಗೆ ಶರಣಾಗಿದ್ದಾರೆ. ಮನೆ ಕಟ್ಟಿಸಲು ಗುಂಡನಾಯಕ ಮತ್ತು ಲಕ್ಷ್ಮಮ್ಮ ಸಾಲ ಮಾಡಿದ್ದರು ಸಾಲಗಾರರ ಕಿರುಕುಳ ತರಲಾರದೆ ಇದೀಗ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಕುರಿತಂತೆ ಮಾಳುರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.