ಬೆಂಗಳೂರು : ಹೈಕೋರ್ಟ್ ಆದೇಶ ಪ್ರತಿಯನ್ನೇ ನಕಲು ಮಾಡಿ ಲಕ್ಷಾಂತರ ಹಣ ವಂಚನೆ ಎಸಗಿದ್ದ ಇಬ್ಬರು ಆರೋಪಿಗಳನ್ನು ವಿಧಾನಸೌಧ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕುಣಿಗಲ್ ಮೂಲದ ವಿಜೇತ್ ಮತ್ತು ಲೋಹಿತ್ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ.
ಹೌದು ಹೈಕೋರ್ಟ್ ನೀಡಿದ ರೀತಿ ಆದೇಶ ಪ್ರತಿಯನ್ನು ಬಂಧಿತ ಆರೋಪಿಗಳು ತಯಾರಿಸುತ್ತಿದ್ದರು ಸೃಷ್ಟಿಸಿದ್ದ ಆದೇಶದಲ್ಲಿ ವಿಜೇತ್ ಇಡಿಯಲ್ಲಿ ಒಂದು ಕೇಸ್ ದಾಖಲಿಸಿದ್ದ. ಆ ಪ್ರಕರಣದಲ್ಲಿ ಒಂದು ಕೋಟಿಗೂ ಹೆಚ್ಚು ಹಣ ಫ್ರೀಜ್ ಆಗಿತ್ತು. ಆದರೆ ಹೈಕೋರ್ಟ್ ನಲ್ಲಿ ಇಡಿ ವಿರುದ್ಧ ವಿಜೇತ್ ಕೇಸ್ ಹಾಕಿದಂತೆ ಇಡಿ ವಿರುದ್ಧ ಆರೋಪಿ ವಿಜೇತ ಗೆಲುವು ಸಾಧಿಸಿದ್ದ. ಫ್ರಿಜ್ ಮಾಡಿದ್ದ ಹಣವನ್ನು ರಿಲೀಸ್ ಮಾಡುವಂತೆ ಆದೇಶವನ್ನು ಸೃಷ್ಟಿ ಮಾಡಲಾಗಿತ್ತು. ಈ ಆದೇಶ ಪ್ರತಿ ತೋರಿಸಿ ಆರೋಪಿಗಳು ಹಲವರಿಗೆ ವಂಚಿಸಿದ್ದಾರೆ.
ನಮಗೆ ಇಡಿ ಅಧಿಕಾರಿಗಳಿಂದ ಕೋಟ್ಯಾಂತರ ರೂಪಾಯಿ ರಿಲೀಸ್ ಆಗಬೇಕಿದೆ. ಅದಕ್ಕೆ ಹೈ ಕೋರ್ಟ್ ಆದೇಶ ಕೂಡ ಮಾಡಿದೆ. ಆದರೆ ಈಗ ನನಗೆ ಇದನ್ನು ಬಿಡಿಸಿಕೊಳ್ಳಲು ಹಣ ಕಟ್ಟಬೇಕಿದೆ. ಇಡಿ ಕೊಟ್ಟ ಬಳಿಕ ಹಣ ವಾಪಸ್ ಕೊಡುವುದಾಗಿ ನಂಬಿಸಿದ್ದ. ಇದನ್ನು ನಂಬಿ ಹಣ ಕೊಟ್ಟವರಿಗೆ ಆರೋಪಿಗಳು ವಂಚಿಸಿದ್ದರು. 70 ಲಕ್ಷಕ್ಕೂ ಹೆಚ್ಚಿನ ಹಣ ಪಡೆದು ಆರೋಪಿಗಳು ವಂಚನೆ ಎಸಗಿದ್ದಾರೆ.ತನ್ನ ಗರ್ಲ್ ಫ್ರೆಂಡ್ ಗು ಕೂಡ ಆರೋಪಿ ವಿಜೇತ್ ವಂಚನೆ ಮಾಡಿದ್ದ ಎನ್ನಲಾಗಿದೆ. ಸದ್ಯ ವಿಧಾನಸೌಧ ಪೊಲೀಸರಿಂದ ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.