ಬೆಂಗಳೂರು : ಉಪೇಂದ್ರ ದಂಪತಿಗಳ ಮೊಬೈಲ್ ಹ್ಯಾಕ್ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, 10 ದಿನಗಳ ಬಳಿಕ ಹ್ಯಾಕರ್ ಗಳ ಮೂಲ ಇದೀಗ ಪತ್ತೆಯಾಗಿದೆ. ಹ್ಯಾಕರ್ ಮೂಲವನ್ನು ಬೆಂಗಳೂರು ಪೊಲೀಸರು ಪತ್ತೆ ಹಚ್ಚಿದ್ದಾರೆ. ಸದಾಶಿವನಗರ ಠಾಣೆ ಪೊಲೀಸರ ಮೂಲ ಪತ್ತೆ ಹಚ್ಚಿದ್ದಾರೆ. ಮೊದಲು ನಟಿ ಪ್ರಿಯಾಂಕ ಮೊಬೈಲ್ ಅವರ ಹ್ಯಾಕ್ ಆಗುತ್ತೆ. ಬಳಿಕ ನಟ ಉಪೇಂದ್ರ ಅವರ ಮೊಬೈಲ್ ಸಹ ಹ್ಯಾಕ್ ಆಗುತ್ತದೆ.
ಈ ಮೊದಲು ಹಲವರ ಮೊಬೈಲ್ ಹ್ಯಾಕ್ ಮಾಡಿ ಹಣವನ್ನು ನಾಲ್ಕು ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಎಲ್ಲಾ ನಕಲಿ ಖಾತೆಗಳಿಗೂ ಹಣ ವರ್ಗಾವಣೆ ಆಗಿದೆ. ಬಳಿಕ ನಳಂದ ಬ್ಯಾಂಕಿಗೆ ಹಣವನ್ನು ಟ್ರಾನ್ಸ್ಯಾಕ್ಷನ್ ಮಾಡಲಾಗಿದೆ 1.65 ಲಕ್ಷ ಹಣವನ್ನು ಸೈಬರ್ ವಂಚಕರು ವರ್ಗಾವಣೆ ಮಾಡಿಕೊಂಡು ನಕಲಿ ಖಾತೆಯನ್ನು ಬ್ಲಾಕ್ ಮಾಡಿದ್ದಾರೆ. ಇನ್ನು ಕೆಲವರು ಡೌಟ್ ಬಂದು ಹಣ ಕಳಿಸಿರಲಿಲ್ಲ. ಅದಾದ ಮೇಲೆ ಉಪೇಂದ್ ಅವರ ಪತ್ನಿಗೆ ನಮ್ಮ ಫೋನ್ ಹ್ಯಾಕ್ ಆಗಿರುವುದು ಗೊತ್ತಾಗಿದೆ.
ನಾಲ್ಕೈದು ಜನ ಬಿಹಾರಿ ಗ್ಯಾಂಗ್ ಇರುವುದು ಇದೀಗ ಬಯಲಾಗಿದೆ ಪೊಲೀಸರು ಬಿಹಾರ್ ಗ್ಯಾಂಗ್ ಇರುವುದು ಸ್ಪಷ್ಟಪಡಿಸಿದ್ದಾರೆ. ಬಿಹಾರಕ್ಕೆ ಇದೀಗ ಒಂದು ಸ್ಪೆಷಲ್ ತಂಡ ಕಳುಹಿಸಲು ಪೊಲೀಸರು ಸಜ್ಜಾಗಿದ್ದಾರೆ. ಬೆಂಗಳೂರು ಸೆಂಟ್ರಲ್ ಡಿಸಿಪಿ ಅಕ್ಷಯ್ ಮಚೀಂದ್ರ ಸೂಚನೆ ನೀಡಿದ್ದಾರೆ. 10 ನಿಮಿಷ ಯಾಮಾರಿದರೂ ಕೂಡ 10 ಲಕ್ಷ ಹಣ ಹೋಗುತ್ತಿತ್ತು.10 ಲಕ್ಷ ಹಣ ಹ್ಯಾಕರ್ಸ್ ಗಳ ಪಾಲು ಆಗುತ್ತಿತ್ತು. ಇದೀಗ ಅಕ್ಷಯ ಮಚಿಂದ್ರ ಒಂದು ಸ್ಪೆಷಲ್ ತಂಡವನ್ನು ಬಿಹಾರಕ್ಕೆ ಕಳುಹಿಸಲು ಸೂಚನೆ ನೀಡಿದ್ದಾರೆ.