ಗದಗ : ಕಳೆದ ಕೆಲವು ದಿನಗಳ ಹಿಂದೆ ಗದಗದಲ್ಲಿ ಒಂದು ವಿಚಿತ್ರವಾದ ಘಟನೆ ನಡೆದಿತ್ತು. ಮುಸ್ಲಿಂ ಯುವತಿಯಿಂದಲೇ ಹಿಂದೂ ಯುವಕನಿಗೆ ಲವ್ ಜಿಹಾದ್ ಆರೋಪ ಕೇಳಿ ಬಂದಿತ್ತು. ಇದೀಗ ಈ ಒಂದು ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪತಿ ವಿಶಾಲ್ ವಿರುದ್ಧ ಈಗ ಯುವತಿ ಪೋಸ್ಕೋ ಪ್ರಕರಣ ದಾಖಲು ಮಾಡಿದ್ದಾಳೆ.
ಹೌದು ಪತ್ನಿಯೇ ಮುಸ್ಲಿಂ ಧರ್ಮಕ್ಕೆ ಬಲವಂತದ ಮತಾಂತರ ಮಾಡಿದ್ದು, ಮಾನಸಿಕ ಕಿರುಕುಳ ನೀಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ವಿಶಾಲ್ ಮನವಿ ಮಾಡಿದ್ದಾರೆ. ಅತ್ತ ಪತ್ನಿ ಕೂಡ, ಅಪ್ರಾಪ್ತೆ ಆಗಿದ್ದಾಗ ಬಲವಂತವಾಗಿ ದೈಹಿಕ ಸಂಪರ್ಕ ಮಾಡಿದ್ದನೆಂದು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರಿಗೂ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿ ತನಿಖೆ ಆರಂಭಿಸಿದ್ದಾರೆ.
ಪ್ರಕರಣ ಹಿನ್ನೆಲೆ?
ವಿಶಾಲ್ ಕುಮಾರ್ ಹಾಗೂ ಮುಸ್ಲಿಂ ಧರ್ಮದ ಯುವತಿ ಕಳೆದ ಮೂರು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಪ್ರೀತಿ-ಪ್ರೇಮಮದ ವಿಷಯವನ್ನು ಮನೆಯವರಿಂದ ಮುಚ್ಚಿಟ್ಟಿದ್ದ ಜೋಡಿ, 2024ರ ನವೆಂಬರ್ 26 ನೇ ತಾರೀಕು ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ನಂತರ, ರಿಜಿಸ್ಟರ್ ವಿಷಯ ಯುವತಿಯ ಕುಟುಂಬಕ್ಕೆ ಗೊತ್ತಾಗಿದೆ. ಆ ಬಳಿಕ, ಮುಸ್ಲಿಂ ಸಂಪ್ರದಾಯದಂತೆಯೇ ಮದುವೆಗೆ ಮಾಡಿಕೊಳ್ಳಲು ವಿಶಾಲ್ ಬಳಿ ಯುವತಿ ಕುಟುಂಬ ದುಂಬಾಲು ಬಿದ್ದಿತ್ತು.
ಪ್ರೀತಿಸಿದ್ದ ಯುವತಿಗಾಗಿ ಮದುವೆಗೆ ಒಪ್ಪಿಕೊಂಡಿದ್ದ ವಿಶಾಲ್ ಕುಮಾರ್, 2025ರ ಏಪ್ರಿಲ್ 25 ನೇ ತಾರೀಕು ಮುಸ್ಲಿಂ ಸಂಪ್ರದಾಯದಂತೆ ನಿಖಾ ಮಾಡಿಕೊಂಡಿದ್ದ.ಆದರೆ, ವಿಶಾಲ್ಗೆ ಅರಿವಿಲ್ಲದೇ ನಿಖಾ ನಾಮದಲ್ಲಿ ಆತನ ಹೆಸರನ್ನು ವಿರಾಜ್ ಸಾಬ್ ಎಂದು ದಾಲಿಸಲಾಗಿತ್ತು ಎಂದು ಆರೋಪಿಸಲಾಗಿತ್ತು. ನಿಖಾ ದಫ್ತರ್ನಲ್ಲಿ, ಅಂದರೆ ಮದುವೆಯ ನೋಂದಣಿಯಲ್ಲಿ ಬದಲಾದ ಹೆಸರನ್ನು ಉರ್ದುವಿನಲ್ಲಿ ಬರೆಯಲಾಗಿತ್ತು.
ಅನ್ಯ ಧರ್ಮಕ್ಕೆ ಮತಾಂತರ ಮಾಡಿರುವ ಬಗ್ಗೆ ಗೊತ್ತಾಗುತ್ತಿದಂತೆಯೇ ಯುವಕ ವಿಶಾಲ್, ಮೋಸದ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪತ್ನಿ , ಅವಳ ತಂದೆ-ತಾಯಿಯ ವಿರುದ್ದ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆದರೆ, ಪತ್ನಿಯೇ ಈಗ ಪೋಸ್ಕೋ ದೂರು ನೀಡಿದ್ದಾಳೆ. ಯುವತಿಯ ಆರೋಪವನ್ನು ವಿಶಾಲ್ ತಳ್ಳಿಹಾಕಿದ್ದಾರೆ.