ನವದೆಹಲಿ : ಆದಾಯ ತೆರಿಗೆ ನ್ಯಾಯಮಗಳಿಂದ ಕಾಂಗ್ರೆಸ್ ಗೆ ಬಿಗ್ ಶಾಕ್ ಎದುರಾಗಿದ್ದು, 2017-18ರಲ್ಲಿ ಪಡೆದಿದ್ದ ದೇಣಿಗೆ ಹಣಕ್ಕೆ ತೆರಿಗೆ ಕಟ್ಟುವಂತೆ ಸೂಚನೆ ನೀಡಲಾಗಿದೆ. ಐಟಿ ಇಲಾಖೆಯ ಆದೇಶ ಪ್ರಶ್ನಿಸಿ ಐಟಿ ಟ್ರಿಬ್ಯುನಲ್ ಗೆ ಕಾಂಗ್ರೆಸ್ ಪಕ್ಷ ಮೇಲ್ಮನವಿ ಸಲ್ಲಿಸಿತ್ತು. ಆದರೆ ಪಡೆದಿರುವ ದೇಣಿಗೆಗೆ 199 ಕೋಟಿ ತೆರಿಗೆ ಕಟ್ಟಲು ಆದೇಶ ಹೊರಡಿಸಿದೆ. ಆದಾಯ ತೆರಿಗೆ ಇಲಾಖೆ ಆದೇಶವನ್ನು ನ್ಯಾಯ ಮಂಡಳಿ ಎತ್ತಿ ಹಿಡಿದಿದೆ.
ಹೌದು ದೇಣಿಗೆ ಹಣಕ್ಕೆ 199.5 ಕೋಟಿ ತೆರಿಗೆ ಬೇಡಿಕೆಯನ್ನು ಪ್ರಶ್ನಿಸಿ ಕಾಂಗ್ರೆಸ್ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಅರ್ಜಿಯನ್ನು ಆದಾಯ ತೆರಿಗೆ ನ್ಯಾಯಮಂಡಳಿ ತಿರಸ್ಕರಿಸಿದ್ದರಿಂದ ಕಾಂಗ್ರೆಸ್‌ಗೆ ದೊಡ್ಡ ಹಿನ್ನಡೆಯಾಗಿದೆ. ನಗದು ದೇಣಿಗೆ ಮಿತಿಗಳನ್ನು ಉಲ್ಲಂಘಿಸಲಾಗಿದೆ ಎಂದು ನ್ಯಾಯಮಂಡಳಿ ಉಲ್ಲೇಖಿಸಿದೆ.
ಐಟಿ ವಿನಾಯಿತಿ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಗೆ ಭಾರೀ ಶಾಕ್ ಎದುರಾಗಿದೆ. 2018-19ರ ವರ್ಷದಲ್ಲಿ ₹199.15 ಕೋಟಿ ಆದಾಯಕ್ಕೆ ಆದಾಯ ತೆರಿಗೆ ವಿನಾಯಿತಿ ಕೋರಿ ಕಾಂಗ್ರೆಸ್ ಸಲ್ಲಿಸಿದ್ದ ಮೇಲ್ಮನವಿಯನ್ನು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ ವಜಾಗೊಳಿಸಿದೆ.ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 13Aನಲ್ಲಿರುವ ಷರತ್ತುಗಳ ಉಲ್ಲಂಘನೆಯಾಗಿದೆ ಎಂಬ ಕಾರಣಕ್ಕೆ ವಿನಾಯಿತಿ ನೀಡಲು ನ್ಯಾಯಮಂಡಳಿ ತಿರಸ್ಕರಿಸಿದೆ. D3 ರಿಟರ್ನ್ಸ್ಗಳನ್ನು ತಡವಾಗಿ ಕಾಂಗ್ರೆಸ್‌ಗೆ ಕಂಟಕವಾಗಿ ಪರಿಣಮಿಸಿದೆ. ಸಲ್ಲಿಸಿದ್ದೇ ಕಾಂಗ್ರೆಸ್ ಗೆ ಮುಳುವಾಗಿದೆ.
ಏನಿದು ₹199 ಕೋಟಿ ದೇಣಿಗೆ ವಿವಾದ?
2018-19ರ ಆರ್ಥಿಕ ವರ್ಷದಲ್ಲಿ 199.15 ಕೋಟಿ ಆದಾಯವನ್ನು ತೆರಿಗೆ ಮುಕ್ತವೆಂದು ಕಾಂಗ್ರೆಸ್ ಘೋಷಿಸಿತ್ತು. ಆದರೆ ಐಟಿ ರಿಟರ್ನ್ ಕಾಂಗ್ರೆಸ್ ಗಡುವಿನ ನಂತರ ಐಟಿ ರಿಟರ್ನ್ಸ್ ಸಲ್ಲಿಸಿತ್ತು. ಆದ್ದರಿಂದ ಇಷ್ಟೆಲ್ಲಾ ಸಮಸ್ಯೆ ಆಗಿದೆ.