ಉತ್ತರಕನ್ನಡ : ಉತ್ತರ ಕನ್ನಡದಲ್ಲಿ ಗೌರವದ ದುರಂತ ಒಂದು ಸಂಭವಿಸಿದ್ದು ಮೊಬೈಲ್ ನೋಡಬೇಡ ಎಂದು ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಮನನೊಂದ 7ನೇ ತರಗತಿಯ ವಿದ್ಯಾರ್ಥಿ ಒಬ್ಬ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಮಂಗಳವಾಡ ಎಂಬ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಯನ್ನು ಓಂ ಕದಂ (13) ಎಂದು ತಿಳಿದುಬಂದಿದೆ.
ಕಳೆದ ಮಂಗಳವಾರ ರಾತ್ರಿ ನಡೆದಂತಹ ಘಟನೆ ಇದೀಗ ಇಂದು ತಡವಾಗಿ ಬೆಳಕಿಗೆ ಬಂದಿದೆ ನಿತ್ಯ ಓಂ ಕದಂ ಹೆಚ್ಚಾಗಿ ಮೊಬೈಲ್ ನೋಡುತ್ತಾ ಕಾಲ ಕಳೆಯುತ್ತಿದ್ದ ಇದನ್ನು ಗಮನಿಸಿದ ಆತನ ತಂದೆ ಮನೋಹರ್ ಮೊಬೈಲ್ ನೋಡದಂತೆ ಬುದ್ಧಿವಾದ ಹೇಳಿದ್ದಾರೆ. ಮಾತು ಕೇಳದೆ ಓಂ ಮತ್ತೆ ಮತ್ತೆ ಮೊಬೈಲ್ ನೋಡುತ್ತಿದ್ದ. ಮಂಗಳವಾರ ತಂದೆ ಮನೋಹರ್ ಮಗನಿಗೆ ಗದರಿಸಿ ಮೊಬೈಲ್ ಕರೆದುಕೊಂಡಿದ್ದಾರೆ ಇದರಿಂದ ಮನನೊಂದು ಓಮು ಕದಂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಂಬಂಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.