ಬೆಂಗಳೂರು : ಬೆಂಗಳೂರಿನಲ್ಲಿ ಬೀದಿ ನಾಯಿಗಳ ದಾಳಿಗೆ ವ್ಯಕ್ತಿ ಬಲಿಯಾಗಿದ್ದು, ಬೀದಿನಾಯಿಗಳ ದಾಳಿಯಿಂದ 71 ವರ್ಷದ ಸೀತಪ್ಪ ಎನ್ನುವ ವೃದ್ಧರೊಬ್ಬರು ಇದೀಗ ಸಾವನಪ್ಪಿದ್ದಾರೆ.
ಕೋಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದ್ದು, ನಿನ್ನೆ ಬೆಳಿಗ್ಗೆ ವಾಕಿಂಗ್ ಹೋಗುತ್ತಿದ್ದಾಗ ಸೀತಪ್ಪ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. ವೃದ್ಧ ಸೀತಪ್ಪ ಅವರ ಕೈ ಕಾಲು ಮತ್ತು ಮುಖಕ್ಕೆ ಬೀದಿ ನಾಯಿಗಳು ಕಚ್ಚಿ ಗಂಭೀರವಾಗಿ ಗಾಯಗೊಳಿಸಿದ್ದವು. ಇದೀಗ ಚಿಕಿತ್ಸೆ ಫಲಕಾರಿ ಆಗದೆ ಸೀತಪ್ಪ ಎಂದು ಕೊನೆಯುಸಿರಿಳೆದಿದ್ದಾರೆ.