ಯಾದಗಿರಿ : ಯಾದಗಿರಿಯಲ್ಲಿ ಇಂದು ಘೋರವಾದ ದುರಂತ ಸಂಭವಿಸಿದ್ದು, ಆಟವಾಡುತ್ತ ತೆರೆದ ಬಾವಿಯಲ್ಲಿ ಬಿದ್ದು 6 ವರ್ಷದ ಬಾಲಕ ಸಾವನಪ್ಪಿರುವ ಘಟನೆ ಯಾದಗಿರಿ ನಗರದಲ್ಲಿ ನಡೆದಿದೆ.
ಯಾದಗಿರಿ ನಗರದ ಕೋಲಿವಾಡ ಬಡಾವಣೆಯಲ್ಲಿ ಈ ಒಂದು ಘಟನೆ ನಡೆದಿದ್ದು, ಆಟವಾಡುತ್ತಾ ತೆರೆದ ಬಾವಿಗೆ ಬಿದ್ದು ರಾಜು (6) ಎನ್ನುವ ಬಾಲಕ ಸಾವನಪ್ಪಿದ್ದಾನೆ. ಸದ್ಯ ಬಾಲಕನಿಗಾಗಿ ಅಗ್ನಿಶಾಮಕ ಸಿಬ್ಬಂದಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ.ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.