ಶಿವಮೊಗ್ಗ : ಪಟಾಕಿ ಸಿಡಿದ ಪರಿಣಾಮ 9 ವರ್ಷದ ಬಾಲಕನ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಪಟಾಕಿ ಸಿಡಿದ ಪರಿಣಾಮ ಬಾಲಕನಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದಲ್ಲಿ ನಡೆದಿದೆ. ಬಾಲಕನ ಮೈ, ಕೈಗಳಿಗೆ ಹಾಗೂ ಎರಡು ಕಣ್ಣುಗಳಿಗೆ ಗಾಯಗಳಗಿವೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದೆ. ಗಾಯಗೊಂಡಿರುವ 9 ವರ್ಷದ ಬಾಲಕ ತೇಜು ಎಂದು ತಿಳಿದುಬಂದಿದೆ. ಜನವರಿ 1ರಂದು ತೀರ್ಥಹಳ್ಳಿಯಲ್ಲಿ ತೆಪ್ಪೋತ್ಸವ ನಡೆದಿತ್ತು. ತೆಪೋತ್ಸವದ ಅಂಗವಾಗಿ ಸಿಡಿಮದ್ದು ಪ್ರದರ್ಶನ ಆಯೋಜನೆ ಮಾಡಲಾಗಿತ್ತು.ಈ ಸಂದರ್ಭದಲ್ಲಿ ಸಿಡಿಯದ ಪಟಾಕಿಗಳನ್ನು ಬಾಲಕರು ಒಟ್ಟುಗೂಡಿಸಿದ್ದಾರೆ.ಈ ವೇಳೆ ಏಕಾಏಕಿ ಪಟಾಕಿ ಸ್ಫೂಟಗೊಂಡು ತೇಜು ಗಂಭೀರವಾಗಿ ಗಾಯಗೊಂಡಿದ್ದಾನೆ.