ಬೆಂಗಳೂರು : ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ಆರೋಪ ಮಾಡಿರುವ ವಿಚಾರವಾಗಿ ಬೆಂಗಳೂರಿನಲ್ಲಿ ಮಾಜಿ ಸಚಿವ ಅರವಿಂದ್ ಲಿಂಬಾವಳಿ ಸುದ್ದಿಗೋಷ್ಠಿ ನಡೆಸಿದರು. ರಾಹುಲ್ ಗಾಂಧಿ ಆರೋಪಗಳಿಗೆ ಅರವಿಂದ ಲಿಂಬಾವಳಿ ಇದೀಗ ಪ್ರತಿಕ್ರಿಯೆ ನೀಡಿದ್ದಾರೆ.
ಮಹದೇವಪುರ ಕ್ಷೇತ್ರದಲ್ಲಿ ಮತಗಳ್ಳತನ ಆಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಅವರು ಹೇಳಿಕೆ ಸ್ವಾಗತಿಸಬೇಕು ಏನು ಮಾತಾಡಬೇಕು ಗೊತ್ತಾಗುತ್ತಿಲ್ಲ. 2008ರಿಂದ ಮಹದೇವಪುರ ಕ್ಷೇತ್ರದಲ್ಲಿ ಬಿಜೆಪಿ ಒಟ್ಟು ನಾಲ್ಕು ಬಾರಿ ಗೆದ್ದಿದೆ. ಮಹದೇವಪುರದಲ್ಲಿ ವಲಸಿಗೆರೆ ಹೆಚ್ಚು ಇದ್ದಾರೆ, ಹೀಗಾಗಿ ಮತದಾರರ ಸಂಖ್ಯೆ ಹೆಚ್ಚಳ ಆಗಿದೆ.
ಮಹಾದೇವಪುರ ಕ್ಷೇತ್ರದಲ್ಲಿ ಒಂದೇ ಕಟ್ಟಡದಲ್ಲಿ 80 ಜನ ವೋಟರ್ಸ್ ವಾಸ ಮಾಡುತ್ತೀದ್ದಾರೆ. ರಾಹುಲ್ ಗಾಂಧಿ ಆರೋಪಕ್ಕೆ ಲಿಂಬಾವಳಿ ಇದೀಗ ತಿರುಗೇಟು ನೀಡಿದ್ದು, ಚುನಾವಣೆಯಲ್ಲಿ ಮತದಾನ ಮಾಡಿರುವವರೇ 6 ಜನ. ಆ ಕಟ್ಟಡದಲ್ಲಿ ವಾಸವಿರುವುದು ಹೋಟೆಲ್ ಸಿಬ್ಬಂದಿಗಳು ಉದ್ದಕ್ಕೂ ರೂಂಗಗಳಿವೆ ಅಲ್ಲಿ ವಾಸ ಮಾಡುತ್ತಿದ್ದಾರೆ. ಹೋಟೆಲ್ ಮಾಲೀಕರು ಅವರಿಗೆ ರೂಮ್ ಕೊಟ್ಟಿದ್ದಾರೆ. ಹೋಟೆಲ್ನಲ್ಲಿ ಕೆಲಸ ಮಾಡುವವರು ಮತ ಹಾಕಬಾರದು.
ನಮ್ಮ ಬಳಿ ಇರುವ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡಿ ಈ ಪಕ್ಷ ನಾಯಕರು ಇದು ಶೋಭೆಯಲ್ಲ ನಿಮ್ಮ ಸರ್ಕಾರದಲ್ಲಿ ನಿಮ್ಮ ಅಧಿಕಾರಿಗಳಿಗೆ ಕೆಲಸ ಮಾಡಿದ್ದಾರೆ ಚುನಾವಣಾ ಆಯೋಗಕ್ಕೆ ದೂರು ಕೊಡದೆ ಏಕೆ ಹೋದರು ಮಹದೇವಪುರ ಕ್ಷೇತ್ರದ ಮಾಹಿತಿಯನ್ನು ವರಿಷ್ಠರು ಕೇಳಿದ್ದಾರೆ ಕೇಂದ್ರದ ನಮ್ಮ ನಾಯಕರು ಕ್ಷೇತ್ರದ ಮಾಹಿತಿ ಕೇಳಿದ್ದಾರೆ ಮಾಹಿತಿಯನ್ನು ನಮ್ಮ ಹೈಕಮಾಂಡ್ ಗೆ ಕೊಡುತ್ತೇವೆ ಎಂದು ತಿಳಿಸಿದರು