ಗದಗ : ಆಗ ತಾನೇ ಶಾಲೆ ಮುಗಿಸಿಕೊಂಡು ಮನೆಗೆ ಬಂದಂತಹ 8 ವರ್ಷದ ಬಾಲಕನೊಬ್ಬ ಸ್ನೇಹಿತರೊಂದಿಗೆ ಆಟವಾಡುವಾಗ ಗೋಡೆಯ ಬಳಿ ಅವಿತುಕೊಂಡಿದ್ದಾನೆ. ಈ ವೇಳೆ ಏಕಾಏಕಿ ಗೋಡೆ ಕುಸಿದು 8 ವರ್ಷದ ಬಾಲಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ನರಗುಂದ ಪಟ್ಟಣದ ದಂಡಾಪೂರ ಕುರುಬಗೇರಿ ಓಣಿಯಲ್ಲಿ ಘಟನೆ ಜರುಗಿದೆ.
ಮೃತ ಬಾಲಕನನ್ನು ಪ್ರದೀಪ್ ಗೋನಾಳ್ ಎಂದು ತಿಳಿದುಬಂದಿದೆ. ಈತ ಶಾಲೆಯಿಂದ ಮನೆಗೆ ಬಂದ ಬಳಿಕ ಗೆಳೆಯರೊಂದಿಗೆ ಆಟವಾಡುವಾಗ ಘಟನೆ ಜರುಗಿದೆ. ಗೋಡೆ ಬಿದ್ದ ಬವಾರಿ ಶಬ್ದಕ್ಕೆ ಓಡಿ ಬಂದು ಸ್ಥಳೀಯರು ರಕ್ಷಿಸಿದ್ದಾರೆ ಆದರೆ ಆಸ್ಪತ್ರೆಗೆ ಕರೆದೊಯುವಾಗ ಪ್ರದೀಪ್ ಮಾರ್ಗ ಮಧ್ಯೆ ಕೊನೆಯುಸಿರೆಳಿದಿದ್ದಾನೆ.ಘಟನೆ ಕುರಿತು ನರಗುಂದ ಪಟ್ಟಣ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.