ಕಲಬುರ್ಗಿ : ಆಕಸ್ಮಿಕ ಬೆಂಕಿಯಿಂದಾಗಿ 8 ಅಂಗಡಿಗಳು ಸುಟ್ಟು ಭಸ್ಮವಾಗಿರುವ ಘಟನೆ ಕಲಬುರ್ಗಿ ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ಈ ಒಂದು ಅಗ್ನಿ ಅವಘಡ ಸಂಭವಿಸಿದೆ.
ಜೇವರ್ಗಿ ತಾಲೂಕಿನ ಬುಟ್ನಾಳ ರಸ್ತೆಯಲ್ಲಿರುವ 8 ಅಂಗಡಿಗಳು ಆಕಸ್ಮಿಕ ಬೆಂಕಿಯಿಂದಾಗಿ ಸುಟ್ಟು ಕರಕಲಾಗಿವೆ . ದೇವೇಂದ್ರ, ಮನೋಹರ, ಶ್ರೀಶೈಲ್, ಪ್ರಕಾಶ್, ಮೋಹನ್ ಹಾಗೂ ಬಸವರಾಜ್ ಎಂಬುವವರ ಅಂಗಡಿಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ.
ಈ ವೇಳೆ 8 ಅಂಗಡಿಯಲ್ಲಿದ್ದ ಸಾಗುವಾನಿ ಬಾಗಿಲಗಳು, ಯಂತ್ರಗಳು ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಘಟನೆ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾಸ್ಥಳಕ್ಕೆ ತಹಶೀಲ್ದಾರ್ ಮಲ್ಲಣ್ಣ ಯಲಗೋಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.