ಬೆಂಗಳೂರು : ಸದ್ಯ ಚೀನಾದಲ್ಲಿ ಕೋರೋನ ವೈರಸ್ ಗಿಂತಲೂ ಇದೀಗ ಎಚ್ಎಂಪಿವಿ ಹೊಸ ವೈರಸ್ ಅಬ್ಬರಿಸುತ್ತಿದ್ದು, ಈ ಒಂದು ವೈರಸ್ ಇದೀಗ ಭಾರತಕ್ಕೂ ದಾಂಗುಡಿ ಇಟ್ಟಿದೆ. ಹೌದು ಇಂದು ಕರ್ನಾಟಕದ ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ಎಚ್ಎಂಪಿವಿ ವೈರಸ್ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ 8 ತಿಂಗಳ ಮಗುವಿನಲ್ಲಿ ಎಚ್ಎಂಪಿವಿ ವೈರಸ್ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಆರೋಗ್ಯ ಇಲಾಖೆ ಇದನ್ನು ಇದುವರೆಗೂ ಖಚಿತಪಡಿಸಿಲ್ಲ ಎಂದು ತಿಳಿದುಬಂದಿದೆ. ನಗರದಲ್ಲಿ 8 ತಿಂಗಳ ಮಗುವೊಂದಕ್ಕೆ ಹೆಚ್ಎಂಪಿವಿ ವೈರಸ್ ತಗುಲಿದೆ ಎಂದು ಖಾಸಗಿ ಆಸ್ಪತ್ರೆ ತನ್ನ ವರದಿಯಲ್ಲಿ ತಿಳಿಸಿದೆ. ಆದರೆ ರಾಜ್ಯ ಆರೋಗ್ಯ ಇಲಾಖೆ ವೈರಸ್ ಪತ್ತೆಯಾಗಿರುವುದನ್ನು ಖಚಿತಪಡಿಸಿಲ್ಲ.
‘HMPV’ ವೈರಸ್ ತಗುಲಿರುವ ಶಂಕೆ ಹಿನ್ನೆಲೆಯಲ್ಲಿ ಮಗುವಿನ ಟ್ರಾವೆಲ್ ಹಿಸ್ಟರಿ ಸಂಗ್ರಹಿಸಿದ್ದು, ಯಾವುದೇ ಸೋಂಕು ತಗುಲಿರುವ ಸಾಧ್ಯತೆ ಖಚಿತವಾಗಿಲ್ಲ. ಹೆಚ್ಚಿನ ತಪಾಸಣೆಗಾಗಿ ಪುಣೆಯ ಪ್ರಯೋಗಾಲಯಕ್ಕೆ ಮಾದರಿಯನ್ನು ಕಳಿಸಿಕೊಡಲಾಗಿದ್ದು, ಅದರ ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.