ಬೆಂಗಳೂರು : ಬೆಂಗಳೂರಲ್ಲಿ ರೇಲ್ವೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 70ಲಕ್ಷ ಮೂಲದ ಹ್ಯಾಶಿಶ್ ಆಯಿಲ್ ಜಪ್ತಿ ಮಾಡಿದ್ದಾರೆ. ಬೆಂಗಳೂರು ರೈಲು ನಿಲ್ದಾಣದಲ್ಲಿ ಪೊಲೀಸರು ಓರ್ವ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
ಬಂಧಿತ ಆರೋಪಿಯನ್ನು ಆಂಧ್ರ ಮೂಲದ ಆರೋಪಿ ಅಪಲರಾಜು (34) ಎನ್ನುವ ಆರೋಪಿಯನ್ನು ಬಂಧಿಸಿದ್ದಾರೆ. ಈತ ಆಂಧ್ರಪ್ರದೇಶದಲ್ಲಿ ಭರತ್ ಎಂಬಾತನಿಂದ ಆಯಿಲ್ ಖರೀದಿ ಮಾಡಿದ್ದ.ಆಂಧ್ರಪ್ರದೇಶದಿಂದ ಬೆಂಗಳೂರಲ್ಲಿ ಈತ ಮಾರಾಟ ಮಾಡುತ್ತಿದ್ದ ಯಲಹಂಕ ಬಳಿ ಓರ್ವನಿಗೆ ಹ್ಯಾಶೀಶ್ ಆಯಿಲ್ ಮಾರುತಿದ್ದ. ರೈಲ್ವೆ ಪೊಲೀಸರಿಂದ ಆರೋಪಿ ಅಪಲರಾಜು ಬಂಧನವಾಗಿದೆ ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.