ತುಮಕೂರು : ಸಾಮಾನ್ಯವಾಗಿ ಈ ಡೆಂಘಿ ಕಾಯಿಲೆ ಮಳೆಗಾಲದಲ್ಲಿ ಕಂಡುಬರುತ್ತದೆ. ಆದರೆ ಈಗ ಬೇಸಿಗೆ ಕಾಲ ಸಮೀಪಸುತ್ತಿದ್ದೂ, ಈಗಲೂ ಡೆಂಘಿ ಜ್ವರದಿಂದ 7 ವರ್ಷದ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡದಲ್ಲಿ ನಡೆದಿದೆ.
ಹೌದು ಪಾವಗಡ ಪಟ್ಟಣದ ಬಾಬೈಯನ ಗುಡಿ ಬೀದಿ ನಿವಾಸಿ ಕರುಣಾಕರ್ ಈಗ ಡೆಂಘಿಗೆ ಬಲಿಯಾಗಿದ್ದು, ಬಾಲಕನ ಸಾವು ಜನರಲ್ಲಿ ಭಯ ಮೂಡಿಸಿದೆ. ಹರೀಶ್ ಕುಮಾರ್ ಪುತ್ರ ಕರುಣಾಕರ್ ತೀವ್ರವಾಗಿ ಬಳಲಿ ಪಾವಗಡ ಖಾಸಗಿ ಕ್ಲಿನಿಕ್ ಒಂದರಲ್ಲಿ ಕಳೆದ 8 ದಿನದಿಂದ ಚಿಕಿತ್ಸೆ ಪಡೆಯುತಿದ್ದ.
ಆದರೆ ಚಿಕಿತ್ಸೆ ಫಲಿಸದೆ ಬಾಲಕ ಮೃತಪಟ್ಟಿದ್ದಾನೆ. ಬಾಲಕನಿಗೆ ಡೆಂಘಿ ಜ್ವರ ಇರುವ ಕುರಿತು ಕೊನೇ ಕ್ಷಣದವರೆಗು ವೈದ್ಯರು ಪೋಷಕರಿಗೆ ತಿಳಿಸಿಲ್ಲ ಎನ್ನುವ ಆರೋಪ ಕೇಳಿಬಂದಿದೆ. ವೈದ್ಯರ ನಿರ್ಲಕ್ಷ್ಯಕ್ಕೆ ಮಗ ಸಾವನ್ನಪ್ಪಿದ್ದಾನೆ ಎಂದು ಮೃತ ಬಾಲಕನ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಕ್ಲಿನಿಕ್ ಎದುರು ಇದೀಗ ಪ್ರತಿಭಟನೆ ನಡೆಸಿ ಕ್ರಮಕ್ಕೆ ಅಗ್ರಹಿಸಿದ್ದಾರೆ.