ಯಾದಗಿರಿ : ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದಲ್ಲಿ ನಿನ್ನೆ ಒಂದೇ ದಿನದಲ್ಲಿ ಸುಮಾರು 7 ಅಂಗಡಿಗಳಲ್ಲಿ ಸರಣಿ ಕಳ್ಳತನ ನಡೆದಿದೆ. ಬಾರ್, ಕಿರಾಣಿ ಅಂಗಡಿ, ಮೆಡಿಕಲ್ ಶಾಪ್ ನಲ್ಲಿ ಕಳ್ಳತನ ನಡೆದಿದೆ.
ಸುಮಾರು 7 ಕಡೆ ಕಳ್ಳತನ ನಡೆದಿದೆ ಅಂಗಡಿಗಳ ಶೆಟರ್ ಮುರಿದು ಅಂಗಡಿಯಲ್ಲಿದ್ದ ಲಕ್ಷಾಂತರ ರೂಪಾಯಿ ದೋಚಿದ್ದಾರೆ. ಸುರಪುರ ಪಟ್ಟಣದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಲೇ ಇವೆ.ಕುಂಬಾರಪೇಟೆ, ಹಸನಾಪುರ ಗಾಂಧಿವೃತ್ತ ಸೇರಿದಂತೆ ಹಲವಡೆ ಕಳ್ಳತನ ನಡೆದಿದೆ.
ಕಳೆದ ಮೂರು ತಿಂಗಳ ಹಿಂದೆ ದೇವಾಪುರ ಗ್ರಾಮದಲ್ಲೂ ಮನೆ ಕಳ್ಳನ ನಡೆದಿತ್ತು.ಅಲ್ಲದೇ ಎರಡು ತಿಂಗಳ ಹಿಂದೆ ಸುರಪುರದ ಗಾಂಧಿ ವ್ರತದಲ್ಲಿ ಮತ್ತೊಮ್ಮೆ ಕಳ್ಳತನ ಆಗಿತ್ತು. ಈ ಸಂಬಂಧ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.