ಗುಜರಾತ್ : ಗುಜರಾತ್ ನಲ್ಲಿ ಭೀಕರವಾದಂತಹ ರಸ್ತೆ ಅಪಘಾತ ನಡೆದಿದ್ದು ರಸ್ತೆ ಬದಿಯ ಡಿವೈಡರ್ಗೆ ವೇಗವಾಗಿ ಬಂದಂತಹ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕಾಲೇಜಿಗೆ ಹೋಗುತ್ತಿದ್ದ ಐವರು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ಏಳು ಜನರು ಸಾವನ್ನಪ್ಪಿರುವ ಘಟನೆ ಗುಜರಾತ್ನ ಜುನಾಗಢದಲ್ಲಿ ನಡೆದಿದೆ.
ಕಾಲೇಜಿಗೆ ಹೋಗುತ್ತಿದ್ದ ಐವರು ವಿದ್ಯಾರ್ಥಿಗಳು ಒಂದು ಕಾರಿನಲ್ಲಿ ಚಲಿಸುತ್ತಿದ್ದು ವೇಗವಾಗಿ ಬಂದು ರಸ್ತೆಯ ಡಿವೈಡರ್ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಮತ್ತೊಂದು ಕಾರಿಗೆ ಗುದ್ದಿದೆ. ಈ ವೇಳೆ ಮತ್ತೊಂದು ಕಾರಿನಲ್ಲಿ ಚಲಿಸುತ್ತಿದ್ದ ಇನ್ನಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
 
		



 




