ಕೋಲಾರ : ಅಂಗನವಾಡಿ ಮೇಲ್ಚಾವಣಿ ಕುಸಿದು ಬಿದ್ದು ಶಾಲೆಯಲ್ಲಿದ್ದಂತಹ 7 ಮಕ್ಕಳ ಪೈಕಿ 4 ಮಕ್ಕಳಿಗೆ ಗಾಯವಾಗಿದ್ದು ಅದರಲ್ಲಿ ಒರವ ಮಗುವಿಗೆ ತೀವ್ರವಾಗಿ ಗಂಭೀರವಾಗಿ ಕಾಯಕೊಂಡಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ದಾಸರ ಹೊಸಹಳ್ಳಿಯಲ್ಲಿ ಈ ಒಂದು ದುರ್ಘಟನೆ ನಡೆದಿದೆ.
ಹೌದು ಕೋಲಾರ ಜಿಲ್ಲೆಯ ದಾಸರಹೊಸಹಳ್ಳಿ ಎಂಬಲ್ಲಿ ಅಂಗನವಾಡಿ ಶಾಲೆಯ ಮೇಲ್ಚಾವಣಿ ಕುಸಿತವಾಗಿ 7 ಮಕ್ಕಳಿಗೆ ಗಾಯವಾಗಿದೆ. ನಾಲ್ವರು ಮಕ್ಕಳ ತಲೆ ಮತ್ತು ಕೈಕಾಲುಗಳಿಗೆ ಗಾಯವಾಗಿದ್ದು, ಬಂಗಾರಪೇಟೆ ಆಸ್ಪತ್ರೆಯಲ್ಲಿ ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ.
ಅಂಗನವಾಡಿ ಕಟ್ಟಡದ ಮೇಲ್ಚಾವಣಿ ಕುಸಿತವಾಗಿ ಬಂಗಾರಪೇಟೆ ತಾಲೂಕಿನ ದಾಸರಹೊಸಹಳ್ಳಿಯಲ್ಲಿ ಗಾಯಗೊಂಡ 7 ಅಂಗನವಾಡಿ ಮಕ್ಕಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು ಈ ವೇಳೆ ಘಟನೆ ಸ್ಥಳದಲ್ಲಿ ನಾರಾಯಣಸ್ವಾಮಿ ಭೇಟಿ ನೀಡಿ ಅಲ್ಲದೆ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ. ಘಟನೆ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು.