ಚಿಕ್ಕಮಗ : ಕರ್ನಾಟಕದಲ್ಲಿ ಇಂದು ಬಹು ದೊಡ್ಡ ಶರಣಾಗತಿ ನಡೆಯುತ್ತಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಈ ಒಂದು ಶರಣಾಗತಿ ನಡೆಯಲಿದೆ. ದಕ್ಷಿಣ ಭಾರತದ ಮೋಸ್ಟ್ ವಾಂಟೆಡ್ ಆರು ಜನ ನಕ್ಸಲರು ಇಂದು ಚಿಕ್ಕಮಂಗಳುರು ಜಿಲ್ಲಾ ಆಡಳಿತದ ಮುಂದೆ ಶರಣಾಗಬೇಕಿತ್ತು.ಆದರೆ ಸಿಎಂ ಸಿದ್ದರಾಮಯ್ಯ ಅವರ ಸೂಚನೆಯ ಮೇರೆಗೆ ಇದೀಗ ನಕ್ಸಲರು ಬೆಂಗಳೂರಿಗೆ ಆಗಮಿಸುತ್ತಿದ್ದು ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ ಪರಮೇಶ್ವರ್ ಅವರ ಎದುರು ಶರಣಾಗಲಿದ್ದಾರೆ ಎಂದು ತಿಳಿದು ಬಂದಿದೆ .
ಹೌದು ಸಿಎಂ ಹಾಗೂ ಗೃಹ ಸಚಿವರ ಮುಂದೆ 6 ನಕ್ಸಲರು ಶರಣಾಗಲಿದ್ದಾರೆ. ಬಾಳೆಹೊನ್ನುರಿನಿಂದ ಈಗಾಗಲೇ ನಕ್ಸಲರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ನಕ್ಸಲರನ್ನು ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರು ಕರೆತರುತ್ತಿದ್ದಾರೆ. ಚಿಕ್ಕಮಂಗಳೂರು ಎಸ್ಪಿ ವಿಕ್ರಂ ಆಮ್ಟೆ, ISD ಎಸ್ ಪಿ ಹರಿರಾಮ ಶಂಕರ್, ಪಶ್ಚಿಮ ವಲಯದ ಐಜಿಪಿ ಅಮಿತ್ ಸಿಂಗ್ ನೇತೃತ್ವದಲ್ಲಿ ಶರಣಾಗತಿ ಅಗಲಿದ್ದಾರೆ.ಸಿಎಂ ಸಿದ್ದರಾಮಯ್ಯ ಅವರ ಸೂಚನೆಯ ಮೇರೆಗೆ 6 ನಕ್ಸಲರು ಇದೀಗ ಬೆಂಗಳೂರಿನ ಕಡೆಗೆ ಬರುತ್ತಿದ್ದಾರೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ 6 ಜನ ನಕ್ಸಲರು ಶರಣಾಗಲಿದ್ದಾರೆ.