ಜಪಾನ್ : ಜಪಾನ್ ನಲ್ಲಿ ಮತ್ತೊಮ್ಮೆ ಪ್ರಬಲ ಭೂಕಂಪನದ ಅನುಭವವಾಗಿದೆ. ಈ ವರ್ಷದ ಆರಂಭದಲ್ಲಿ ಸಂಭವಿಸಿದ ಭೀಕರ ಭೂಕಂಪದ ನಂತರ ಇದು ಎರಡನೇ ಭೂಕಂಪನವಾಗಿದೆ. ಉತ್ತರ ಜಪಾನ್ ನ ಕರಾವಳಿ ಭಾಗವು ಭೂಕಂಪದ ಕೇಂದ್ರಬಿಂದುವಾಗಿದೆ ಎಂದು ಜಪಾನ್ ಹವಾಮಾನ ಸಂಸ್ಥೆಯನ್ನು ಉಲ್ಲೇಖಿಸಿ ವರದಿಯೊಂದು ತಿಳಿಸಿದೆ.
ಜಪಾನ್ನಲ್ಲಿ ಮಂಗಳವಾರ ಸಂಭವಿಸಿದ ಭೂಕಂಪವು ಅತ್ಯಂತ ತೀವ್ರತೆಯದ್ದಾಗಿತ್ತು. ಉತ್ತರ ಜಪಾನ್ನ ಇವಾಟೆ ಮತ್ತು ಅಮೋರಿ ಪ್ರಾಂತ್ಯಗಳಲ್ಲಿ ಭೂಕಂಪದ ತೀವ್ರತೆ ಹೆಚ್ಚಾಗಿದೆ. ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆ ದಾಖಲಾಗಿದೆ.
ಭೂಕಂಪದ ಕೇಂದ್ರಬಿಂದು ಇವಾಟೆ ಪ್ರಿಫೆಕ್ಚರ್ನ ಉತ್ತರ ಕರಾವಳಿ ಭಾಗವಾಗಿದೆ ಎಂದು ಜಪಾನ್ ಹವಾಮಾನ ಸಂಸ್ಥೆಯನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ.