ಬೆಂಗಳೂರು : ಬಿಜೆಪಿ ಸರ್ಕಾರದ ಆಡಳಿತದಲ್ಲಿ ನಡೆದಿದೆ ಎನ್ನಲಾದ 545 ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪಿಎಸ್ಐ ನೇಮಕಾತಿ ಅಕ್ರಮದ ವರದಿಯನ್ನು ವಿಚಾರಣಾ ಆಯೋಗದ ನ್ಯಾ.ಬಿ ವೀರಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ವರದಿ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಬೆಳಗ್ಗೆ 10:30 ಕ್ಕೆ ಸಿಎಂ ಸಿದ್ದರಾಮಯ್ಯಗೆ ಸಮಿತಿಯು ವರದಿ ಸಲ್ಲಿಸಲಿದೆ ಎಂದು ಹೇಳಲಾಗುತ್ತಿದೆ.ಸಮಿತಿಯು ಪಿಎಸ್ಐ ಅಕ್ರಮದ ವರದಿಯನ್ನು ಸಲ್ಲಿಸಲಿದೆ. 545 ಪಿಎಸ್ಐ ನೇಮಕಾತಿಯ ಅಕ್ರಮದ ವರದಿಯನ್ನು ಸಮಿತಿಯು ಸಿದ್ಧಪಡಿಸಿದೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಿಎಸ್ಐ ನೇಮಕಾತಿ ಅಕ್ರಮ ನಡೆದಿತ್ತು ಎನ್ನಲಾಗಿದ್ದು, ಮರು ತನಿಖೆಗಾಗಿ ಇತ್ತೀಚಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಸಮಿತಿ ರಚಿಸಿತ್ತು. ನಿವೃತ್ತ ನ್ಯಾ. ಬಿ ವೀರಪ್ಪ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಸಮಿತಿಯನ್ನು ರಚಿಸಿತ್ತು.
ಸರ್ಕಾರದ ನಿರ್ದೇಶನದಂತೆ ಇದೀಗ ಸಮಿತಿ ವರದಿಯನ್ನು ಸಿದ್ಧಪಡಿಸಿದೆ ಪ್ರಕರಣದಲ್ಲಿ ಈಗಾಗಲೇ ಕೆಲ ಪೊಲೀಸ್ ಅಧಿಕಾರಿಗಳ ಬಂದನ ಕೂಡ ಆಗಿದೆ ಅಲ್ಲದೆ ಪ್ರಭಾವಿ ರಾಜಕೀಯ ಮುಖಂಡರು ಭಾಗಿಯಾಗಿದ್ದಾರೆ ಎಂಬ ಆರೋಪಾದನೆ ಕೆಲವು ರಾಜಕಾರಣಿಗಳಿಗೂ ವಿಚಾರಣಾ ಆಯೋಗ ನೋಟಿಸ್ ನೀಡಿತ್ತು ಎನ್ನಲಾಗಿದೆ.
ಕಳೆದ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಪಿಎಸ್ಐ ಅಕ್ರಮ ನೇಮಕದಲ್ಲಿ ಅಫ್ಜಲಪುರ ತಾಲೂಕಿನ ಸೊನ್ನ ಗ್ರಾಮದ ಆಡಿ ಪಾಟೀಲ್ ಹಾಗೂ ಬಿಜೆಪಿಯ ಮುಖಂಡರಾಗಿರುವ ದಿವ್ಯ ಹಾಗರಗಿ ಈ ಒಂದು ಅಕ್ರಮ ಪ್ರಕರಣದಲ್ಲಿ ಭಾಗಿಯಾಗಿದ್ದರು ಅಲ್ಲದೆ ಸಿಐಡಿ ತನಿಖೆಯ ನಂತರ ಇವರಿಬ್ಬರಿಗೂ ಜೈಲು ಶಿಕ್ಷೆಯು ಕೂಡ ಆಗಿತ್ತು. ಅಲ್ಲದೆ ಇತ್ತೀಚೆಗೆ ಎಫ್ ಡಿ ಎ ಎಫ್ ಡಿ ಎ ನೇಮಕಾತಿಯಲ್ಲೂ ಕೂಡ ಆರ್‌ಡಿ ಪಾಟೀಲ್ ಭಾಗಿಯಾಗಿದ್ದ ಎನ್ನಲಾಗುತ್ತಿದ್ದು, ಈಗ ಈ ಪ್ರಕರಣದಲ್ಲಿ ಆರ್ ಡಿ.
ಪಾಟೀಲ್ ಬಂಧನದಲ್ಲಿದ್ದಾನೆ.