ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 13 ರಂದು ಅಬುಧಾಬಿಯಲ್ಲಿ ನಡೆಯಲಿರುವ “ಅಹ್ಲಾನ್ ಮೋದಿ” ಮೆಗಾ ಕಾರ್ಯಾಕ್ರಮದಲ್ಲಿ ವಲಸಿಗರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅರೇಬಿಕ್ ಭಾಷೆಯಲ್ಲಿ “ಸ್ವಾಗತ” ಎಂದು ಭಾಷಾಂತರಿಸಲಾದ ಈ ಕಾರ್ಯಕ್ರಮದಲ್ಲಿ ಅಂದಾಜು 50,000 ಜನರು ಭಾಗವಹಿಸಲಿದ್ದಾರೆ. ಇನ್ನೀದು ಭಾರತೀಯ ವಲಸೆಗಾರರ ಅತಿದೊಡ್ಡ ಕೂಟಗಳಲ್ಲಿ ಒಂದಾಗಿದೆ. ಅಂದ್ಹಾಗೆ, 3.3 ಮಿಲಿಯನ್ ಹೊಂದಿರುವ ಯುಎಇ ವಿಶ್ವದಲ್ಲೇ ಅತಿ ಹೆಚ್ಚು ಸಂಖ್ಯೆಯ ಭಾರತೀಯ ವಲಸಿಗರಿಗೆ ನೆಲೆಯಾಗಿದೆ.
ಫೆಬ್ರವರಿ 14 ರಂದು ಬಿಎಪಿಎಸ್ ಹಿಂದೂ ಮಂದಿರದ ಉದ್ಘಾಟನೆಗೆ ಮುಂಚಿತವಾಗಿ ಈ ಕಾರ್ಯಕ್ರಮ ಬಂದಿದೆ, ಅಲ್ಲಿ ಪ್ರಧಾನಿ ಮೋದಿ ಸಮಾರಂಭವನ್ನ ಉದ್ಘಾಟಿಸಲಿದ್ದಾರೆ. ಏಪ್ರಿಲ್ 20, 2019 ರಂದು ಹಿಂದೂ ಮಂದಿರದ ಅಡಿಪಾಯ ಹಾಕಲಾಯಿತು. ಈ ಯೋಜನೆಯ ಇತಿಹಾಸವು 2015 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯಿಂದ ಪ್ರಾರಂಭವಾಗುತ್ತದೆ, ಈ ಸಮಯದಲ್ಲಿ ಯುಎಇ ಸರ್ಕಾರವು ಮಂದಿರಕ್ಕಾಗಿ ಭೂಮಿಯನ್ನ ಮಂಜೂರು ಮಾಡಿತು.
BREAKING: ದತ್ತಪೀಠ ಗೋರಿ ಧ್ವಂಸ ‘ಕೇಸ್ ರೀ ಓಪನ್’ ಸುಳ್ಳು – ‘ಸಿಎಂ ಸಿದ್ಧರಾಮಯ್ಯ’ ಸ್ಪಷ್ಟನೆ
BREAKING: ದಕ್ಷಿಣ ಆಫ್ರಿಕಾ ವಿರುದ್ಧ ‘2ನೇ ಟೆಸ್ಟ್’ನಲ್ಲಿ ‘ಭಾರತ’ಕ್ಕೆ ಭರ್ಜರಿ ಗೆಲುವು | India vs South Africa
BREAKING : ಜನವರಿ 9ರಂದು ‘ICAI CA ಇಂಟರ್, ಅಂತಿಮ’ ಪರೀಕ್ಷೆ ಫಲಿತಾಂಶ ಬಿಡುಗಡೆ