ಉಡುಪಿ : ರಾಜ್ಯದಲ್ಲಿ ಕಾಮುಕರ ಅಟ್ಟಹಾಸ ಮಿತಿಮೀರಿದ್ದು, ಮಹಿಳೆಯರ, ಯುವತಿಯರ ಹಾಗೂ ಪುಟ್ಟ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ಇದೀಗ ಉಡುಪಿಯಲ್ಲಿ ಐದು ವರ್ಷದ ಬಾಲಕಿಗೆ ಚಾಕ್ಲೇಟ್ ಆಮಿಷ ಒಡ್ಡಿ ದುಷ್ಕರ್ಮಿ ಒಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ವರದಿಯಾಗಿದೆ.
ಹೌದು 5 ವರ್ಷದ ಬಾಲಕಿಯೋರ್ವಳು ಅಂಗಡಿ ಬಳಿ ಬಂದಾಗ ಕಾಮುಕನೊಬ್ಬ ಚಾಕಲೇಟ್ ಅಮಿಷ ತೋರಿಸಿದ್ದಾನೆ. ಬಾಲಕಿ ಚಾಕ್ಲೇಟ್ ಆಮಿಷಕ್ಕೆ ಒಳಗಾಗಿ ವ್ಯಕ್ತಿಯ ಜೊತೆಗೆ ತೆರಳಿದ್ದಾಳೆ. ನಿರ್ಜನ ಪ್ರದೇಶಕ್ಕೆ ಕರೆದೋಯ್ದಿದ್ದಾನೆ. ಈ ವೇಳೆ ಆತ ಬಾಲಕಿಯ ಜೊತೆಗೆ ಅಸಭ್ಯವಾಗಿ ವರ್ತಿಸಿ ಖಾಸಗಿ ಅಂಗ ಮುಟ್ಟುತ್ತಿದ್ದಂತೆ, ಬಾಲಕಿ ಜೋರಾಗಿ ಕಿರುಚಿದ್ದಾಳೆ. ಇದರಿಂದ ಹೆದರಿದ ವ್ಯಕ್ತಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು, ದುಷ್ಕರ್ಮಿ ಪತ್ತೆಗಾಗಿ ಬಲೆ ಬೀಸಿದ್ದಾರೆ.