Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಎಳನೀರು vs ಕಬ್ಬಿನ ಹಾಲು: ಈ ಬೇಸಿಗೆಯಲ್ಲಿ ಆರೋಗ್ಯಕ್ಕೆ ಯಾವುದು ಬೆಸ್ಟ್? ತಿಳಿಯಿರಿ

ಹೊನ್ನವಳ್ಳಿ ಗ್ರಾಮದ ಪೊಲೀಸ್ ತನಿಖೆ - Honavalli Police Investigation Scene Tumkur

ತಿಪಟೂರು ಸಮೀಪದ ಹೊನ್ನವಳ್ಳಿಯಲ್ಲಿ ದಲಿತ ಮಹಿಳೆಯ ನಿಗೂಢ ಸಾವು: ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತಿರುವ ಪರಿಸ್ಥಿತಿ

ರಾಜ್ಯದ ಜನತೆಯ ಗಮನಕ್ಕೆ : ಇಲ್ಲಿದೆ ಕರ್ನಾಟಕದ 31 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಂಪರ್ಕ ವಿವರಗಳ ಪಟ್ಟಿ.!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಮಹದೇಶ್ವರ ಬೆಟ್ಟದಲ್ಲಿ 5 ಹುಲಿಗಳ ಹತ್ಯೆ ಕೇಸ್ : ಮೂವರು ಆರೋಪಿಗಳು ಅರಣ್ಯ ಇಲಾಖೆ ಕಸ್ಟಡಿಗೆ
KARNATAKA

BREAKING : ಮಹದೇಶ್ವರ ಬೆಟ್ಟದಲ್ಲಿ 5 ಹುಲಿಗಳ ಹತ್ಯೆ ಕೇಸ್ : ಮೂವರು ಆರೋಪಿಗಳು ಅರಣ್ಯ ಇಲಾಖೆ ಕಸ್ಟಡಿಗೆ

By kannadanewsnow57

ಮೈಸೂರು : ಮಲೈಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ವನ್ಯಜೀವಿ ವಲಯದಲ್ಲಿ 05 ಹುಲಿಗಳು ಅಸ್ವಾಭಾವಿಕವಾಗಿ ಮರಣ ಹೊಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಸದ್ಯ ಮೂವರನ್ನು ಅರಣ್ಯ ಇಲಾಖೆ ಕಸ್ಟಡಿಗೆ ಪಡೆದಿದ್ದಾರೆ.

ಮಾದುರಾಜು, ನಾಗರಾಜ್ ಹಾಗೂ ಕೋನಪ್ಪ ಬಂಧಿತ ಆರೋಒಇಗಳು. ಮೂವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಈ ವೇಳೆ ಅರಣ್ಯ ಅಧಿಕಾರಿಗಳು ಮೂರು ದಿನಗಳ ಕಾಲ ಆರೋಪಿಗಳನ್ನು ಕಸ್ಟಡಿಗೆ ಪಡೆದಿದ್ದಾರೆ.

ದಿನಾಂಕ:-26.06.2025ರಂದು ಮಲೈಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ವನ್ಯಜೀವಿ ವಲಯದ ಗಾಜನೂರು ಗಸ್ತು ಅರಣ್ಯ ಪ್ರದೇಶದಲ್ಲಿ ಮಹದೇಶ್ವರನ ಬಯಲು ಅರಣ್ಯ ಪ್ರದೇಶದ ಕಂಪಾರ್ಟ್ ಮೆಂಟ್ ನಂ.117 ರಲ್ಲಿ 05 ಹುಲಿಗಳು ಅಸ್ವಾಭಾವಿಕವಾಗಿ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹುಲಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ಹಂತದಲ್ಲಿ ಈ ಹುಲಿಗಳ ಮರಣವು ವಿಷಪ್ರಾಶನದಿಂದ ಆಗಿರಬಹುದೆಂದು ಮೇಲ್ನೋಟಕ್ಕೆ ತಿಳಿದು ಬಂದಿತ್ತು.

ಈ ಪ್ರಕರಣವನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972ರ ಅನ್ವಯ ಹಾಗೂ ಕರ್ನಾಟಕ ಅರಣ್ಯ ಕಾಯ್ದೆ 1969ರಂತೆ ಗಂಭೀರವಾದ ವನ್ಯಜೀವಿ ಅಪರಾಧ ಪ್ರಕರಣವೆಂದು ಪರಿಗಣಿಸಿ WLOR No.02/2025-26 ದಿನಾಂಕ:-26.06.2025 ರಂದು ಹೂಗ್ಯಂ ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿ ದಾಖಲಿಸಿ ಕೂಲಂಕುಷವಾಗಿ ವಿಚಾರಣೆಯನ್ನು ಕೈಗೊಂಡಾಗ ಕೆಲವು ಶಂಕಿತ ಆರೋಪಿಗಳಾದ 1) ಕೋನಪ್ಪ ಬಿನ್ ಸೊಣ್ಣೆಗೌಡ, 2) ಮಾದರಾಜು ಬಿನ್ ಶಿವಣ್ಣ, ಕೊಪ್ಪ ಗ್ರಾಮ ಮತ್ತು 3) ನಾಗರಾಜ ಬಿನ್ ಪೂಜಾರಿಗೌಡ, ಕೊಪ್ಪ ಗ್ರಾಮ ರವರುಗಳನ್ನು ದಸ್ತಗಿರಿ ಮಾಡಿ ವಿಚಾರಣೆ ನಡೆಸುತ್ತಿದ್ದು ಇವರುಗಳ ಮೇಲೆ ನಿಯಮಬದ್ಧವಾಗಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಘಟನೆ ಹಿನ್ನೆಲೆ

ಪ್ರೀತಿಯಿಂದ ಸಾಕಿದ್ದ ಹಸುವನ್ನು ಹುಲಿ ಕೊಂದಿದ್ದಕ್ಕೆ ತಾನೇ ವಿಷ ಹಾಕಿ ಹುಲಿಯನ್ನು ಕೊಂದಿರುವುದಾಗಿ ಮಾದನ ತಂದೆ ಶಿವಣ್ಣ ಹೇಳಿಕೆ ನೀಡಿದ್ದ. ಪುತ್ರನನ್ನು ರಕ್ಷಿಸುವ ಸಲುವಾಗಿ ತಾನು ಹುಲಿ ಸಾಯಿಸಿದ್ದಾಗಿ ಹೇಳಿದ್ದರು. ಆದರೆ ಅನುಮಾನಗೊಂಡು ತೀವ್ರ ವಿಚಾರಣೆ ನಡೆಸಿದಾಗ ಶಿವಣ್ಣನ ಪುತ್ರ ಮಾದ ಅಲಿಯಾಸ್ ಮಾದುರಾಜು ಐದು ಹುಲಿಗಳ ಸಾವಿಗೆ ತಾನು ಕಾರಣ. ತಾನೇ ವಿಷಹಾಕಿ ಕೊಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.ಮಾದ ಅಲಿಯಾಸ್ ಮಾದಯರಾಜುಗೆ ಸೇರಿದ್ದ ಕೆಂಚಿ ಎಂಬ ಹೆಸರಿನ ಹಸುವನ್ನು ಹುಲಿ ತಿಂದು ಹಾಕಿತ್ತು. ಇದರಿಂದ ನೊಂದ ಮಾದ ನಾಗರಾಜ್ ಬಳಿ ಹೇಳಿಕೊಂಡಿದ್ದನು. ಆದ್ದರಿಂದ ಇಬ್ಬರು ಹುಲಿ ಕೊಲ್ಲಲು ನಿರ್ಧರಿಸಿದ್ದರು. ಆದ್ದರಿಂದ ಹುಲಿ ಕೊಲ್ಲಲು ಕ್ರಿಮಿನಾಶಕ ತಂದಿಟ್ಟಿದ್ದನು. ನಾಗರಾಜ್ ಮೃತ ಹಸುವಿನ ಕಳೇಬರಕ್ಕೆ ಕ್ರಿಮಿನಾಶಕ ಸುರಿದು ಬಂದಿದ್ದನು. ಇದನ್ನು ತಿಂದ ಹುಲಿಗಳು ಮೃತಪಟ್ಟಿದೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ

BREAKING: 5 tigers killed in Mahadeshwar Hills case: Three accused taken into custody by Forest Department
Share. Facebook Twitter LinkedIn WhatsApp Email

Related Posts

ಎಳನೀರು vs ಕಬ್ಬಿನ ಹಾಲು: ಈ ಬೇಸಿಗೆಯಲ್ಲಿ ಆರೋಗ್ಯಕ್ಕೆ ಯಾವುದು ಬೆಸ್ಟ್? ತಿಳಿಯಿರಿ

2 Mins Read
ಹೊನ್ನವಳ್ಳಿ ಗ್ರಾಮದ ಪೊಲೀಸ್ ತನಿಖೆ - Honavalli Police Investigation Scene Tumkur

ತಿಪಟೂರು ಸಮೀಪದ ಹೊನ್ನವಳ್ಳಿಯಲ್ಲಿ ದಲಿತ ಮಹಿಳೆಯ ನಿಗೂಢ ಸಾವು: ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತಿರುವ ಪರಿಸ್ಥಿತಿ

2 Mins Read

ರಾಜ್ಯದ ಜನತೆಯ ಗಮನಕ್ಕೆ : ಇಲ್ಲಿದೆ ಕರ್ನಾಟಕದ 31 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಂಪರ್ಕ ವಿವರಗಳ ಪಟ್ಟಿ.!

2 Mins Read
Recent News

ಎಳನೀರು vs ಕಬ್ಬಿನ ಹಾಲು: ಈ ಬೇಸಿಗೆಯಲ್ಲಿ ಆರೋಗ್ಯಕ್ಕೆ ಯಾವುದು ಬೆಸ್ಟ್? ತಿಳಿಯಿರಿ

ಹೊನ್ನವಳ್ಳಿ ಗ್ರಾಮದ ಪೊಲೀಸ್ ತನಿಖೆ - Honavalli Police Investigation Scene Tumkur

ತಿಪಟೂರು ಸಮೀಪದ ಹೊನ್ನವಳ್ಳಿಯಲ್ಲಿ ದಲಿತ ಮಹಿಳೆಯ ನಿಗೂಢ ಸಾವು: ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತಿರುವ ಪರಿಸ್ಥಿತಿ

ರಾಜ್ಯದ ಜನತೆಯ ಗಮನಕ್ಕೆ : ಇಲ್ಲಿದೆ ಕರ್ನಾಟಕದ 31 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಂಪರ್ಕ ವಿವರಗಳ ಪಟ್ಟಿ.!

ALERT : ಅತಿಯಾದ ನಿದ್ರೆ ಬರುತ್ತಿದೆಯೇ? ಇದು ಮಾರಕ ಕಾಯಿಲೆಗಳ ಸಂಕೇತವಿರಬಹುದು ಎಚ್ಚರ!

State News
KARNATAKA

ಎಳನೀರು vs ಕಬ್ಬಿನ ಹಾಲು: ಈ ಬೇಸಿಗೆಯಲ್ಲಿ ಆರೋಗ್ಯಕ್ಕೆ ಯಾವುದು ಬೆಸ್ಟ್? ತಿಳಿಯಿರಿ

By kannadanewsnow57 KARNATAKA 2 Mins Read

ಬೇಸಿಗೆಯ ಬಿಸಿಲು ಹೆಚ್ಚಾದಂತೆ ದೇಹ ಬೇಗನೆ ಸುಸ್ತಾಗುತ್ತದೆ ಮತ್ತು ಬಾಯಾರಿಕೆ ಅಧಿಕವಾಗುತ್ತದೆ. ಇಂತಹ ಸಮಯದಲ್ಲಿ ನಮ್ಮ ಕಣ್ಣಮುಂದೆ ಬರುವ ಎರಡು…

ಹೊನ್ನವಳ್ಳಿ ಗ್ರಾಮದ ಪೊಲೀಸ್ ತನಿಖೆ - Honavalli Police Investigation Scene Tumkur

ತಿಪಟೂರು ಸಮೀಪದ ಹೊನ್ನವಳ್ಳಿಯಲ್ಲಿ ದಲಿತ ಮಹಿಳೆಯ ನಿಗೂಢ ಸಾವು: ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತಿರುವ ಪರಿಸ್ಥಿತಿ

ರಾಜ್ಯದ ಜನತೆಯ ಗಮನಕ್ಕೆ : ಇಲ್ಲಿದೆ ಕರ್ನಾಟಕದ 31 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಂಪರ್ಕ ವಿವರಗಳ ಪಟ್ಟಿ.!

ALERT : ಅತಿಯಾದ ನಿದ್ರೆ ಬರುತ್ತಿದೆಯೇ? ಇದು ಮಾರಕ ಕಾಯಿಲೆಗಳ ಸಂಕೇತವಿರಬಹುದು ಎಚ್ಚರ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.